ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ,
ಶೈ.ಜಿ.ಶಿರಸಿ (ಉ.ಕ)
ಜ್ಞಾಪನ
ವಿಷಯ: ವಿದ್ಯಾ
ಪ್ರವೇಶ,ಕಲಿಕಾ ಚೇತರಿಕೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ
ಮಾರ್ಗದರ್ಶಿ ಸೂಚನೆಗಳು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ,
ಶೈ.ಜಿ.ಶಿರಸಿ (ಉ.ಕ)
ಜ್ಞಾಪನ
ವಿಷಯ: ವಿದ್ಯಾ
ಪ್ರವೇಶ,ಕಲಿಕಾ ಚೇತರಿಕೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ
ಮಾರ್ಗದರ್ಶಿ ಸೂಚನೆಗಳು.
ದಿನಾಂಕ : 31-05-2022 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಾಪುರ ಇಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ ಹಾಗೂ ಸ್ಕೊಡ್ ವೆೇಸ್ ಸಂಸ್ಥೆಯ ಸಹಯೋಗದಲ್ಲಿ "ಕಾರ್ಯಾತ್ಮಕ ನಳ ಸಂಪರ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ" ಜಾಗೃತಿಗಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ನಡೆಯಿತು. ಈ ಸ್ಪರ್ಧೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲ್ಲೂಕುಗಳಿಂದ ತಾಲ್ಲೂಕು ಮಟ್ಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ ಸ್ಪರ್ಧಾಳುಗಳು ಆಗಮಿಸಿದ್ದರು.
ಜಿಲ್ಲಾ ಮಟ್ಟದ ಸ್ಪರ್ಧೆ ವಿಷಯಗಳು :
ಪ್ರಬಂಧ ಸ್ಪರ್ಧೆಯ ವಿಷಯ :ಅಂತರ್ಜಲವನ್ನು ನೈಸರ್ಗಿಕ ಸಂಪನ್ಮೂಲವಾಗಿ ಬಳಸಿಕೊಳ್ಳುವ ಬಗ್ಗೆ.
ಚಿತ್ರಕಲಾ ಸ್ಪರ್ಧೆಯ ವಿಷಯ : ಮನುಷ್ಯನ ವಿಕಾಸಕ್ಕೆ ನೀರಿನ ಮಹತ್ವ
ಸ್ಪರ್ಧಾ ಕಾರ್ಯಕ್ರಮದ ಬಳಿಕ ಈ ಹಿಂದೆ ತಾಲೂಕಾ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಯಲ್ಲಾಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎನ್ ಆರ್ ಹೆಗಡೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀಯುತರು ಎಲ್ಲ ಮಕ್ಕಳನ್ನು ಉದ್ದೇಶಿಸಿ ನೀರು ಎಂಬುದು ಎಷ್ಟೊಂದು ಅಮೂಲ್ಯ ವಸ್ತು ,ಭೂಮಂಡಲದಲ್ಲಿ ನೀರಿನ ಹಂಚಿಕೆ ,ಲಭ್ಯವಿರುವ ಶುದ್ಧ ಕುಡಿಯುವ ನೀರಿನ ಮಹತ್ವ ,ನೀರಿನ ಪೋಲಾಗುವಿಕೆಯನ್ನು ತಪ್ಪಿಸುವಲ್ಲಿ ಮಕ್ಕಳ ಪಾತ್ರ ಮೊದಲಾದ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಬಳಿಕ ತಾಲೂಕಾ ಮಟ್ಟದಲ್ಲಿ ಈ ಹಿಂದೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ 6ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಧನ್ಯವಾದಗಳು 🙏🙏🙏🙏
ರಾಷ್ಟ್ರೀಯ ವಿಜ್ಞಾನ ದಿನ
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಕಂಡ ತಾಲುಕು ಯಲ್ಲಾಪುರ ಶೈಕ್ಷಣಿಕ ಜಿಲ್ಲೆ ಶಿರಸಿ ಮತ್ತು ತಾಲೂಕಿನೆಲ್ಲೆಡೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈಲಂದೂರ ಗೌಳಿವಾಡ, ತಾ ಯಲ್ಲಾಪುರ.
ಸುಸಜ್ಜಿತವಾದ ನವೀಕೃತ ಕಂಪ್ಯೂಟರ್ ಕೊಠಡಿಯನ್ನು ದಿನಾಂಕ 18.09.2021 ರಂದು ಮಾನ್ಯ ವಿಧಾನ ಪರಿಷತ್ ಶಾಸಕರು ಶ್ರೀ ಶಾಂತಾರಾಮ ಸಿದ್ದಿಯವರಿಂದ ಉದ್ಘಾಟಿಸಲ್ಪಟ್ಟಿತು..