ತಾಲೂಕಾ ಅಧಿಕಾರಿಗಳು

 ನಮ್ಮ ಮಾರ್ಗದರ್ಶಕರು:

 ನಮ್ಮ ನೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ‍ಮತ್ತು ದಕ್ಷ ಅಧಿಕಾರಿಗಳು

ಶ್ರೀ ನರಸಿಂಹ ಆರ್‌ ಹೆಗಡೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಲ್ಲಾಪುರ, ಶಿರಸಿ ಶೈ.ಜಿಲ್ಲೆ ಉತ್ತರಕನ್ನಡ


ಕಿರು ಪರಿಚಯ:
ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಮುದ್ರ ತೀರದ ಗ್ರಾಮ ಹೊಲನಗದ್ದೆ ಗ್ರಾಮದಲ್ಲಿ ಜನಿಸಿ ಅಲ್ಲಿಯೇ ಪ್ರಾಥಮಿಕ ಪೌಢ ಶಿಕ್ಷಣ ಮುಗಿಸಿ ಕುಮಟಾದಲ್ಲಿ ಕಾಲೇಜು ಶಿಕ್ಷಣ ಪೂರೈಸಿ, ಬಿ.ಎಡ್‌ ಶಿಕ್ಷಣದ ನಂತರ ಕರ್ನಾಟಕ ಶಿಕ್ಷಣ ಸೇವೆ  ೧೯೯೪ ರ ಬ್ಯಾಚ್‌ನಲ್ಲಿ ಮುಖ್ಯಶಿಕ್ಷಕರೆಂದು ಆಯ್ಕೆಯಾಗಿ, ಡಿ.ವಾಯ್.ಪಿ.ಸಿ. ಯಾಗಿ ಸೇವೆಸಲ್ಲಿಸಿರುತ್ತಾರೆ. ೨೦೧೨ ರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆ ನಿರ್ವಹಣೆಯಲ್ಲಿದ್ದು  ಈಗ ಯಲ್ಲಾಪುರ ತಾಲೂಕಿನಲ್ಲಿ ೨೦೧೮ರಿಂದ ಶಿಕ್ಷಕರ ಅಚ್ಚುಮೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳಂಕ ರಹಿತ ಸೇವೆಯೇ ಅವರ ಗುರುತಾಗಿದ್ದು ತಾಲೂಕು ಕಂಡ ಉತ್ತಮ ಶಿಕ್ಷಣ ಅಧಿಕಾರಿಗಳಲ್ಲಿ ಇವರೂ ಒಬ್ಬರು.


ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಮತ್ತು ನೆಚ್ಚಿನ ಅಧಿಕಾರಿಗಳು

Shriram Hegade


ಶ್ರೀ ಶ್ರೀರಾಮ ಹೆಗಡೆ.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು,
ಅಕ್ಷರ ದಾಸೋಹ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ ಉತ್ತರಕನ್ನಡ

ಜಂಗಮವಾಣಿ ಸಂಖ್ಯೆ:
ಇ-ಮೈಲ್:‌ ssayellapur@gmail.com, brcyellapur@gmail.com, yellapurbrc@gmail.com



ಕಿರು ಪರಿಚಯ:
ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಡಿನಬಾಳದವರು, ಪ್ರಾಥಮಿಕ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಹೊನ್ನಾವರದಲ್ಲಿ ಮುಗಿಸಿರುತ್ತಾರೆ.  2010 ರ ಬ್ಯಾಚ್‌ ನ K.E.S ಅಧಿಕಾರಿಗಳು. 2017 ರಿಂದ ಸಮನ್ವಯಾಧಿಕಾರಿಗಳಾಗಿ ಮತ್ತು ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಕಾರ್ಯಕ್ರಮ, ಯಲ್ಲಾಪುರ, ಶಿರಸಿ ಶೈ.ಜಿ. ಉತ್ತರ ಕನ್ನಡ ಇಲ್ಲಿ ಕಾರ್ಯನಿರ್ವಹಣೆ. ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಮಹದಾಸೆ ಉಳ್ಳವರಾಗಿದ್ದು ಅದಕ್ಕಾಗಿಯೇ ಶ್ರಮಿಸುತ್ತಿದ್ದಾರೆ.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate