BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ತಾಲೂಕಾ ಮಟ್ಟದ ಯುವಸಂಸತ್ತು ಸ್ಫರ್ಧೆ 2025

ತಾಲೂಕಾ ಮಟ್ಟದ ಯುವಸಂಸತ್ತು ಸ್ಫರ್ಧೆ 2025

ಇಂದು ದಿನಾಂಕ 07-11-2025ರಂದು ಯಲ್ಲಾಪುರ ತಾಲೂಕ ಪಂಚಾಯತ್ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಮಾಜ ವಿಜ್ಞಾನ ಬಳಗ ಮತ್ತು ತಾಲೂಕ ಪಂಚಾಯತ್ ಸಹಯೋಗದಲ್ಲಿ ತಾಲೂಕ ಮಟ್ಟದ ಯುವ ಸಂಸತ್ತು ಸ್ಪರ್ಧೆ ನಡೆಯಿತು ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಸಂತೋಷ ಜಗಳೂರು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಅಜಯ ನಾಯಕ್, ತಾಲೂಕ ಸಮಾಜ ವಿಜ್ಞಾನ ಬಳಗದ ಅಧ್ಯಕ್ಷರಾದ ಶ್ರೀ ಜನಾರ್ಧನ ಗಾವ್ಕರ್ ಪಾಲ್ಗೊಂಡಿದ್ದರು. 

ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಶಾಸಕರಾದ ಶ್ರೀ ಶಿವರಾಂ ಹೆಬ್ಬಾರ್ ಅವರು ಸದನದಲ್ಲಿ ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಉತ್ತಮ ಸಂಸದೀಯ ಪಟುಗಳಾಗಿ ತರಬೇತಿ ಹೊಂದಲು ಯುವ ಸಂಸತ್ತು ಸ್ಪರ್ಧೆ ಸಹಕಾರಿ ಎಂದರು. ವಿದ್ಯಾರ್ಥಿಗಳ ಜೊತೆಗೆ ಸಮಯ ಬಿಡುವು ಮಾಡಿಕೊಂಡು ಭಾಗವಹಿಸಿ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನ ಕೊಡಾಡಿದರು.

ಸರ್ಕಾರಿ ಪ್ರೌಢಶಾಲೆ ಬಿಸಗೋಡಿನ ಕು. ಪ್ರಣವ ಗಣಪತಿ ಭಟ್ ಮತ್ತು ಕು. ಶ್ರಿಯಾ ಶ್ರೀಧರ್ ಭಟ್,  ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿಯ ಕು. ಪನ್ನಗ ಶಾಸ್ತ್ರಿ, ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಿ ತನ್ಮಯಿ ಹಾಗೂ ಕು. ಶ್ರದ್ಧಾ ಹರಿಜನ್ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. 

ನಿರ್ಣಾಯಕರಾಗಿ ನಿವೃತ್ತ ಅಧ್ಯಾಪಕರಾದ ಶ್ರೀ ಶ್ರೀಪಾದ ಹೆಗಡೆ,  ತಾಲೂಕ ಪಂಚಾಯತ್ ಅಧಿಕಾರಿಗಳಾದ ಶ್ರೀ ರಾಜಾರಾಮ್ ವೈದ್ಯ, ಗುಳ್ಳಾಪುರ ಪಿಯು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ರವಿಚಂದ್ರ ನಾಯಕ್ ಕಾರ್ಯ ನಿರ್ವಹಿಸಿದರು, ಶಿಕ್ಷಕ ಶ್ರೀಧರ ಹೆಗಡೆ ವಿಧಾನಸಭಾ ಕಾರ್ಯ ಕಲಾಪವನ್ನು ನಡೆಸಿಕೊಟ್ಟರು ಶಿಕ್ಷಣ ಸಂಯೋಜಕರಾದ ಶ್ರೀ ಪ್ರಶಾಂತ ಜಿಎನ್,  ಶಿಕ್ಷಕರಾದ ಪ್ರಕಾಶ್ ಭಟ್ ಹಾಗೂ ಚಿದಾನಂದಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು, ಏಲ್ಲಾ ಶಾಲೆಯ ಶಿಕ್ಷಕರು

ಕಾರ್ಯಕ್ರಮದ ಫೋಟೋ ನೋಟಗಳು







ಶ್ರೀ ಚಿದಾನಂದ ಸರ್‌, ಸರ್ವೋದಯ ಶಾಲೆ ವಜ್ರಳ್ಳಿ ಇವರ ಕೈಯಲ್ಲರಳಿದ ವಿಡಿಯೋ ಗುಚ್ಛ



SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ