BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ತಾಲೂಕಾ ಪ್ರಗತಿ ಪರಿಶೀಲನಾ ಸಭೆ ದಿನಾಂಕ: 03-12-2025

ತಾಲೂಕಾ ಪ್ರಗತಿ ಪರಿಶೀಲನಾ ಸಭೆ ದಿನಾಂಕ: 03-12-2025

ಶಿರಸಿ ಶೈಕ್ಷಣಿಕ ಜಿಲ್ಲೆಯ ಯಲ್ಲಾಪುರ ತಾಲೂಕಿನ  ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾ ಶ್ರೀಮತಿ ರೇಖಾ ನಾಯ್ಕ ರವರ ನೇತೃತ್ವದಲ್ಲಿ ನವೆಂಬರ್ 2025 ರ ತಾಲೂಕಾ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ದಿನಾಂಕ 3/12 /2025 ರಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ  ಅನುಷ್ಠಾನಾಧಿಕಾರಿಗಳಿಗೆ ಮಾಸಿಕ ಪ್ರಗತಿ ಪರಿಶೀಲನ ಸಭೆಯನ್ನು ಬಿ ಆರ್ ಸಿ ಕಚೇರಿ ಯಲ್ಲಾಪುರದಲ್ಲಿ  ಆಯೋಜಿಸಿಲಾಯಿತು. ಎಲ್ಲಾ ಬಿ.ಆರ್.ಪಿ.ಗಳು,  ಸಿ ಆರ್ ಪಿ ಯವರು ಭಾಗವಹಿಸಿ ಕ್ಲಸ್ಟರ್ ಗಳ ಮಾಹಿತಿಗಳನ್ನ ಪಡೆಯಲಾಯಿತು. ಕೆಳಕಂಡ ಮಾಹಿತಿಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

1) ನಿಮ್ಮ ಕ್ಲಸ್ಟರ್ ನಲ್ಲಿ ಇರುವ ಶಾಲೆಯಿಂದ ಹೊರಗುಳಿದ ಮಕ್ಕಳ ಯಾದಿ, ಯಾರು ಇಲ್ಲದಿದ್ದಲ್ಲಿ ಶೂನ್ಯ ವರದಿಗಳ ಕುರಿತು ಚರ್ಚಿಸಿದರು. 
2) OOSC ಮಕ್ಕಳ ಮಾಹಿತಿಯನ್ನು ವಿದ್ಯಾಂಜಲಿ ಪೋರ್ಟಲ್ ನಲ್ಲಿ ಇಂದೀಕರಿಸಿದ ಬಗ್ಗೆ ದೃಢೀಕರಣ.
3) UDISE PLUS ನಲ್ಲಿ DROPBOX ನಲ್ಲಿರುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ.
4) ತುರ್ತು ಶಾಲಾ ತಪಾಸಣೆ ಅಗತ್ಯವಿರುವ ಶಾಲೆಗಳ ಯಾದಿಯನ್ನ ಪಡೆಯಲಾಯಿತು.
5) ಡೆಸ್ಕ ಬೆಂಚ್ ಮಾಹಿತಿ  SATS ನಲ್ಲಿ ಇಂದೀಕರಿಸದ ಶಾಲೆಗಳ ಯಾದಿ ಪಡೆದು ಇನ್ನೂ ಇಂದೀಕರಿಸದ ಶಾಲೆಗಳ ವಿವರ ಪಡೆಯಲಾಯಿತು.
6) ಸರಕಾರಿ ಆದೇಶ ಅನ್ವಯ ಎಲ್ಲ ಶಾಲೆಗಳಲ್ಲಿ ಒಂದು ಹೆಚ್ಚುವರಿ ಅವಧಿ ನಡೆಸುತ್ತಿರುವ ಬಗ್ಗೆ ದೃಢೀಕರಣಗಳನ್ನ ಪಡೆಯಲಾಯಿತು.
7)ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಆಟದ ಅವಧಿ ನಿರ್ವಹಿಸಿದ ಬಗ್ಗೆ ಮಾಹಿತಿ ಪಡೆದು, ಅನುಷ್ಠಾನವಾಗುವಂತೆ ತಿಳಿಸಲಾಯಿತು.
8) ಡಿಸೆಂಬರ್ ಟಿಪಿ, ನವೆಂಬರ್ ತಿಂಗಳ ಟಿಡಿಗಳನ್ನು ಪಡೆದು ಫೈಲ್ನಲ್ಲಿ ನಿರ್ವಹಿಸಲಾಯಿತು.
9) ಸರಕಾರಿ ನೌಕರರ‌ ಕ್ರೀಡಾಕೂಟದಲ್ಲಿ‌ ಭಾಗವಹಿಸುವಂತೆ ತಿಳಿಸಲಾಗಿದೆ.
10) ತಾಲೂಕಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಭೇಟಿಯ ಸಮಯದಲ್ಲಿ ಮೊದಲಿಗೆ ಅಕ್ಷರ ದಾಸೋಹ ಕಾರ್ಯಕಮದ ಅಡುಗೆ ಕೋಣೆ ಮತ್ತು ಧಾನ್ಯ, ಅಕ್ಕಿಯ ಗುಣಮಟ್ಟ, ಹಾಲಿನ ಪ್ಯಾಕೇಟಿನ ದಿನಾಂಕಗಳನ್ನು ಪರಿಶೀಲಿಸಿ ಸಮಸ್ಯೆಗಳು ಕಂಡುಬಂದಲ್ಲಿ ಶಿಕ್ಷಕರಿಗೆ ತಿಳಿಸಿ ಷರಾವನ್ನ ಬರೆದು ಬರಲು ತಿಳಿಸಲಾಯಿತು. 
ಹೊಸದಾಗಿ ಕರ್ತವ್ಯಕ್ಕೆ ಹಾಜರಾದ ಶ್ರೀ ಸುಧಾಕರ ನಾಯಕ ಮತ್ತು ಶ್ರೀಮತಿ ಕಲಾವತಿ ನಾಯಕ ರವರಿಗೆ ಸ್ವಾಗತ ಕೋರಲಾಯಿತು.

ಸಭೆಯಲ್ಲಿ ಸಮನ್ವಯಾಧಿಕಾರಿಗಳಾದ ಶ್ರೀ ಸಂತೋಷಕುಮಾರ ಜಿಗಳೂರ, ಪ್ರಾಥಮಿಕ ಶಿಕ್ಷಣ ಸಂಯೋಜಕರಾದ ಶ್ರೀ ಸುಧಾಕರ‌ ನಾಯಕ,  ಪ್ರೌಢ ಬಿ.ಆರ್.ಪಿ.ಗಳಾದ ಶ್ರೀ ಪ್ರಶಾಂತ ಪಟಗಾರ, ಪ್ರಾಥಮಿಕ ಬಿ.ಆರ್.ಪಿ.ಗಳಾದ ಶ್ರೀಮತಿ‌ ಸುಲೋಚನಾ ಹೆಗಡೆ, ಪ್ರೌಢ ಶಿಕ್ಷಣ ಸಂಯೋಜಕರಾದ ಶ್ರೀ ಪ್ರಶಾಂತ ಜಿ.ಎನ್.,  ಸಿ.ಆರ್.ಪಿಗಳಾದ ಶ್ರೀ ಕೃಷ್ಣಾನಂದ ನಾಯ್ಕ, ಶ್ರೀ ರವೀಂದ್ರ ನಾಯ್ಕ,  ಶ್ರೀ ವಿಶ್ವನಾಥ ಮರಾಠೆ, ಶ್ರೀ ನಾಗರಾಜ ನಾಯ್ಕ, ಶ್ರೀ ಚಂದ್ರಹಾಸ ನಾಯ್ಕ, ಶ್ರೀ ಮೋಹನ್ ನಾಯ್ಕ, ಶ್ರೀ ಪ್ರಭಾಕರ ಭಟ್ಟ, ಶ್ರೀ ಶ್ರೀನಿವಾಸ ದೇವಾಡಿಗ, ಶ್ರೀಮತಿ ಅಮಿತಾ ನಾಯ್ಕ, ಶ್ರೀಮತಿ ದೀಪ ಶೇಟ್, ಶ್ರೀಮತಿ ಕಲಾವತಿ ನಾಯಕ ಸಭೆಯಲ್ಲಿ‌ ಹಾಜರಿದ್ದರು.
SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ