BLOCK RESOURCE CENTER YELLAPUR
Sirsi Edn Dist Uttara Kannada
Teacher's Area
Home » » ಶಿಕ್ಷಣ ಸುರಭಿ: ಸುದ್ದಿ ಸಮಾಚಾರ

ಶಿಕ್ಷಣ ಸುರಭಿ: ಸುದ್ದಿ ಸಮಾಚಾರ

ಶಿಕ್ಷಣ ಸುರಭಿ ಸುದ್ದಿ

ದಿನಾಂಕ:06-02-2021

ಶಿಕ್ಷಣ ಸುರಭಿ ಚಾನೆಲ್‌ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗಲಿ: ಶ್ರೀ ಶಿವರಾಮ ಹೆಬ್ಬಾರ

ಕಾರ್ಯಕ್ರಮದಲ್ಲಿ ಮಾನ್ಯ ಸಚಿರು
    ನಮ್ಮ ಕಛೇರಿಯಲ್ಲಿ ಮಾನ್ಯ ಕಾರ್ಮಿಕ ಸಚಿವರು ಮತ್ತು ಜಿಲ್ಲಾ  ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ ಹೆಬ್ಬಾರರವರು ಬಿ.ಆರ್.ಸಿ ಯಲ್ಲಾಪುರದ 'ಶಿಕ್ಷಣ ಸುರಭಿ' ಬ್ಲಾಗ್ ಮತ್ತು ಯು-ಟ್ಯೂಬ್ ಚಾನಲ್ ಉದ್ಘಾಟಿಸಿದರು. ಉದ್ಘಾಟಿಸಿದ ಮಾತಾಡಿದ ಸಚಿವರು ಕೋರೋನಾ ಕಾಲದಲ್ಲಿ ಶಾಲೆ ಪ್ರಾರಂಭಿಸುವುದು ಎಷ್ಟು ಕಷ್ಟವಾಯಿತು ಎಂದು ತಮ್ಮ ಅನುಭವ ತಿಳಿಸಿದರು. ಎಷ್ಟೇ ತೊಂದರೆ ಇದ್ದರೂ ಶಾಲೆಗಳನ್ನು ಪ್ರಾರಂಭಿಸಲಾಗಿದೆ, ಆರೋಗ್ಯದ ವಿಷಯದಲ್ಲಿ ವಿದ್ಯಾರ್ಥಿಗಳದ್ದು ಎಷ್ಟು ಮುಖ್ಯವೋ ಶಿಕ್ಷಕರದ್ದು ಅಷ್ಟೇ ಮುಖ್ಯ ಎಂದರು. ಶಿಕ್ಷಕರು ತಮ್ಮ ಬದ್ಧತೆ ಮೆರೆಯಬೇಕು ಎಂದರು. ಶಿಕ್ಷಣ ಸುರಭಿ ಬ್ಲಾಗ್‌ ಮತ್ತು ಯೂ-ಟ್ಯೂಬ್‌ ಚಾನೆಲ್‌ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗಲಿ ಎಂದು ಹಾರೈಸಿದರು

ಶಿಕ್ಷಣ ಸುರಭಿ ಬ್ಲಾಗ್‌ ಮತ್ತು ಯೂ-ಟ್ಯೂಬ್‌ ಚಾನೆಲ್‌ ಉದ್ಘಾಟನೆ

ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಎನ್.ಆರ್.ಹೆಗಡೆಯವರು ಸ್ವಾಗತಿಸಿ ಪ್ರಾಸ್ಥಾವಿಕ ನುಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ಉಪಸ್ಥಿತರಿದ್ದರು. ಪ್ರೌಢ ಶಾಲೆಗಳ ಮುಖ್ಯಶಿಕ್ಷಕರುಗಳು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಸಂಯೋಜಕರುಗಳು, ಬಿ.ಐ.ಆರ್.ಟಿಗಳು ಹಾಜರಿದ್ದರು.


ಸುದ್ಧಿ- ಶಿಕ್ಷಣ ಸುರಭಿ ಟೆಕ್ನಿಕಲ್‌ ತಂಡ, ಕೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ(ಉ.ಕ.)

ಶಿಕ್ಷಣಾಧಿಕಾರಿಗಳ ಮಾತು

ಇಂದು ಉದ್ಘಾಟನೆಗೊಂಡ ಶಿಕ್ಷಣ ಸುರಭಿ ಬ್ಲಾಗ್ ಮತ್ತು ಯೂಟ್ಯೂಬ್ ಚಾನೆಲ್ ಲೋಕಾರ್ಪಣೆಗೊಂಡ ನಿಮಿತ್ತ ಮಾನ್ಯ‌ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಶಯ:
   "ಕೊರೋನೋತ್ತರ ಕಾಲದಲ್ಲಿ ಎಲ್ಲಾ ಜನರು ಪಾಠ ಕಲಿತಿರುವಂತೆ, ವಿದ್ಯಾಗಮ ಕಾಲದಲ್ಲಿ ಶಿಕ್ಷಕರು ತಯಾರಿಸಿದ ಇ-ಕಂಟೆಂಟ್ ಗಳನ್ನು  ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ ಸಮಾಜ ಕ್ರಾಫ್ಟ್ ಕಲೆ,ಹಾಗೂ ನೈತಿಕ-ಮೌಲ್ಯ ಶಿಕ್ಷಣ ವಿಷಯಗಳಲ್ಲಿ ತಾಲ್ಲೂಕಿನ ನುರಿತ  ಶಿಕ್ಷಕರ ಸಹಾಯದಿಂದ ತಯಾರಿಸಿ ಅವುಗಳನ್ನು ಅಗತ್ಯವಿರುವ ಎಲ್ಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಲ್ಲಾ ಸಮಯದಲ್ಲೂ ಲಭ್ಯವಾಗುವಂತೆ ಯೂ-ಟ್ಯೂಬ್ ಚಾನಲ್ ಹಾಗೂ ತಾಲ್ಲೂಕಿನ ಎಲ್ಲಾ ಸಿ ಆರ್ ಸಿ, ಶಾಲಾ ಮಾಹಿತಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅಗತ್ಯವಾದ ಪ್ರಶ್ನೆ ಪತ್ರಿಕೆಗಳು  ಎಲ್ಲಾ ವಿಷಯಗಳ ಇ ಕಂಟೆಂಟ್ ಲಭ್ಯವಿರುವ ಬ್ಲಾಗ್ ಒದಗಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ತಾಲ್ಲೂಕಿನ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗುವುದು. ಇದನ್ನು ಅಭಿವೃದ್ಧಿಪಡಿಸಿದ ತಾಲ್ಲೂಕಿನ ಬಿ ಆರ್ ಸಿ, ಸಮನ್ವಯ ಅಧಿಕಾರಿಗಳು, ಬಿ ಅರ್ ಪಿ ಗಳು ಹಾಗೂ ತಾಲ್ಲೂಕಿನ ಶಿಕ್ಷಕ ಬಳಗಕ್ಕೆ ವಂದನೆಗಳು, ಅಭಿನಂದೆಗಳು🎉🙏"

--- ಶ್ರೀ ಎನ್.ಆರ್.ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು‌, ಯಲ್ಲಾಪುರ


SHARE

About BRC YELLAPUR

ತಾಲೂಕಾ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲುಕಿನಲ್ಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಜೊತೆಯಲ್ಲಿ ಸ್ಥಿತವಾಗಿರುವ ಕೇಂದ್ರವು ಶಿಕ್ಷಕರಿಗೆ ಸಂಪನ್ಮೂಲ ಕೇಂದ್ರವೇ ಆಗಿದೆ. ಇಲ್ಲಿ ನಡೆಯುವ ತರಬೇತಿಗಳಿಂದ ಶಿಕ್ಷಕ ವರ್ಗದವರು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಕಾರಿಯಾಗಿದೆ.

0 Comments :

ಕಾಮೆಂಟ್‌‌ ಪೋಸ್ಟ್‌ ಮಾಡಿ