ಮಂಗಳವಾರ, ಜೂನ್ 21, 2022

ವಿದ್ಯಾ ಪ್ರವೇಶ,ಕಲಿಕಾ ಚೇತರಿಕೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂಚನೆಗಳು.

 

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಶೈ.ಜಿ.ಶಿರಸಿ (ಉ.ಕ)

 

ಜ್ಞಾಪನ

 

      ವಿಷಯ:  ವಿದ್ಯಾ ಪ್ರವೇಶ,ಕಲಿಕಾ ಚೇತರಿಕೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ 

             ಮಾರ್ಗದರ್ಶಿ ಸೂಚನೆಗಳು.

 

                  ತಾಲೂಕಿನಾದ್ಯಂತ ಸರಕಾರಿ ಶಾಲೆಗಳಲ್ಲಿ ದಿನಾಂಕ 16.05.2022 ರಿಂದ ಕಲಿಕಾ ಚೇತರಿಕೆ ಮತ್ತು ವಿದ್ಯಾಪ್ರವೇಶ ಕಾರ್ಯಕ್ರಮಗಳು ಅನುಷ್ಠಾನಗೊಂಡಿದ್ದು, ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕರಲ್ಲಿ ಈ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಕೆಲವು ಗೊಂದಲಗಳಿರುವುದು ಕಂಡು ಬಂದಿದೆ. ದಿನಾಂಕ 20.06.2022 ರಂದು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈ.ಜಿಲ್ಲೆ ರವರು ಸಭೆ ನಡೆಸಿ, ಕಾರ್ಯಕ್ರಮದ ಅನುಷ್ಠಾನದ ಕುರಿತು ಕೆಲವು ಸೂಚನೆಗಳನ್ನು ನೀಡಿರುತ್ತಾರೆ. ಆದ್ದರಿಂದ ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಈ ಕೆಳಗಿನಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.

 

1. ಜೂನ್ ತಿಂಗಳಲ್ಲಿ ಕಲಿಕಾ ಚೇತರಿಕೆ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ನಡೆಸುವುದು. 

 

2. ನೈದಾನಿಕ ಆವಲೋಕನ ನಡೆಸಿ, ಪ್ರತಿ ವಿದ್ಯಾರ್ಥಿವಾರು ವಿಷಯವಾರು ಮಾಹಿತಿಯನ್ನು ದಾಖಲಿಸಿಡುವುದು.

 

3. ಶಿಕ್ಷಕರು ಕಲಿಕಾ ಚೇತರಿಕ ಉಪಕ್ರಮದ ಪೂರ್ವಸಿದ್ಧತಾ ಚಟುವಟಿಕೆಗಳಾಗಿ ಸಂದರ್ಶನ, ಪ್ರಶೋತ್ತರಗಳು, ಚರ್ಚೆ, ಸಂವಾದ ಮತ್ತು ವೀಕ್ಷಣೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು.

 

4. ವಿದ್ಯಾ ಪ್ರವೇಶದ 72 ದಿನಗಳ ಚಟುವಟಿಕೆಯಲ್ಲಿ ಆಯಾ ದಿನದ ಚಟುವಟಿಕೆಯನ್ನು ಕಡ್ಡಾಯವಾಗಿ ನಿರ್ವಹಿಸುವುದು, ಇದಕ್ಕೆ ಸಂಬಂಧಿಸಿದ ಚಟುವಟಿಕೆ ಚಾರ್ಟನ್ನು ನಲಿಕಲಿ ತರಗತಿಯಲ್ಲಿ ಪ್ರದರ್ಶಿಸುವುದು. (72 ದಿನಗಳ ಚಾರ್ಟ್) 

 

5. ಕಲಿಕಾ ಪೂರ್ವ ಸಿದ್ಧತಾ ಚಟುವಟಿಕೆಗಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಎಲ್ಲಾ ವಿದ್ಯಾರ್ಥಿಗಳಿಗೂ ಬರುವಂತೆ ಚಟುವಟಿಕೆ ರೂಪಿಸಿ, ಅನುಷ್ಠಾನಗೊಳಿಸುವುದು, 

 

6. ವಿದ್ಯಾಪ್ರವೇಶಕ್ಕೆ ಸಂಬಂಧಿಸಿದಂತೆ ಇಲಾಖೆ ತಿಳಿಸಿದ ಮೌಲ್ಯಮಾಪನವನ್ನು (7-15-30 ದಿನಗಳಿಗೆ) ಮಾಡಿ ಅಗತ್ಯ ದಾಖಲೆ ನಿರ್ವಹಿಸುವುದು.

 

7. ಕಲಿಕಾ ಚೇತರಿಕೆಗೆ ಸಂಬಂಧಿಸಿದಂತೆ ಕಲಿಕಾ ಫಲಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಮಾಡುವುದು. 

 

8. ಮುಂದಿನ ಹದಿನೈದು ದಿನಗಳವರೆಗೆ ಬೇಕಾಗುವ/ಅತಿ ಅಗತ್ಯವಿರುವ ಕಲಿಕಾ ಹಾಳೆಗಳನ್ನು ವಿಷಯವಾರು ಮುದ್ರಿಸಿ/ಬಿಳಿ ಹಾಳೆ ಬಳಸಿ ಚಟುವಟಿಕೆ ಮಾಡಿಸಿ ತರಗತಿ ನಿರ್ವಹಿಸುವುದು ಮತ್ತು ಕೃತಿ ಸಂಪುಟದಲ್ಲಿ ಕಲಿಕಾ ಹಾಳೆಯನ್ನು ವಿಷಯವಾರು ಜೋಡಿಸಿ ದಿನಾಂಕದೊಡನೆ ಪರಿಶೀಲಿಸಿ ಇಡುವುದು.

 

9. ಕಲಿಕಾ ಚೇತರಿಕೆ ಮತ್ತು ವಿದ್ಯಾ ಪ್ರವೇಶಕ್ಕೆ ಸಂಬಂಧಿಸಿದಂತೆ ಕಳೆದೆರಡು ವರ್ಷದ ಮುಖ್ಯವಾದ ಸಾಮರ್ಥ್ಯಗಳ ಜೊತೆಗೆ ಈ ವರ್ಷದ ಪಠ್ಯಕ್ಕೆ ಸಂಬಂಧಿಸಿದ ಸಾಮರ್ಥ್ಯಗಳನ್ನು ಕೂಡ ಬೋಧಿಸುತ್ತಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡುವುದು. 

 

10. ತರಬೇತಿಯಲ್ಲಿ ತಿಳಿಸಿದಂತೆ ರೂಪಣಾತ್ಮಕ-೦೧ಕ್ಕೆ ತಯಾರಿ ನಡೆಸುವುದು ಮತ್ತು ಅಗತ್ಯ ದಾಖಲೆ ನಿರ್ವಹಿಸುವುದು, ಅಂದಾಜು ಪತ್ರಿಕೆ, ದಿನಚರಿ ನಿರ್ವಹಿಸುವುದು.

 

11. UDISE + ನ್ನು ದಿನಾಂಕ 24.06.2022 ರೊಳಗಡೆ ಪೂರ್ಣಗೊಳಿಸುವುದು, 

 

12. ತಮ್ಮ ಶಾಲೆಗೆ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳನ್ನು SATS ENROLLMENT ಮಾಡುವುದು. ದಿನಾಂಕ:23/06/2022 ಒಳಗೆ 100% ಸಾಧಿಸುವುದು.

 

13. ಯಾವುದೇ ತರಗತಿಗೆ ದಾಖಲಾಗಬೇಕಾದ ವಿದ್ಯಾರ್ಥಿಗಳ TC issue/ Admission through TC ಬಾಕಿ ಇರದಂತೆ ನೋಡಿಕೊಳ್ಳುವುದು. ದಾಖಲಾತಿ ರಜಿಸ್ಟರ್ಅನ್ನು ಅಚ್ಚುಕಟ್ಟಾಗಿ ನಿರ್ವಹಿಸಿಡುವುದು.

 

14. SATS - MDM APP & KAR MDM AMS ಮೂಲಕ ವಿದ್ಯಾರ್ಥಿಗಳ ಪ್ರತಿ ದಿನದ ಹಾಜರಿ,ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಫಲಾನುಭವಿಗಳ ಸಂಖ್ಯೆ ಹಾಕುವುದು, ಎಲ್ಲಾ ದಾಖಲೆಯನ್ನು ಪ್ರತಿದಿನ ನಿರ್ವಹಿಸಿಡುವುದು,

 

15. ಕೋವಿಡ್ SOP ಯನ್ನು ಕಡ್ಡಾಯವಾಗಿ ನಿರ್ವಹಿಸುವುದು. 

 

16. ಮಳೆಯ ದಿನಗಳಂದು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು.

 

                                                  (ಶ್ರೀ ಎನ್ ಆರ್ ಹೆಗಡೆ)

ಕ್ಷೇತ್ರ ಶಿಕ್ಷಣಾಧಿಕಾರಿಗಳು

ಯಲ್ಲಾಪುರ ಶಿ.ಶೈ.ಜಿಲ್ಲೆ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate