ರಾಷ್ಟ್ರೀಯ ವಿಜ್ಞಾನ ದಿನ
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುತ್ಕಂಡ ತಾಲುಕು ಯಲ್ಲಾಪುರ ಶೈಕ್ಷಣಿಕ ಜಿಲ್ಲೆ ಶಿರಸಿ ಮತ್ತು ತಾಲೂಕಿನೆಲ್ಲೆಡೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು
ಶಾಲೆಯಲ್ಲಿ ವಿಜ್ಞಾನ ಮತ್ತು ಪ್ರದರ್ಶನ ವಿಜ್ಞಾನ ಮಾದರಿಗಳು ಕಲಿಕೋಪಕರಣಗಳ ಪ್ರದರ್ಶನ ಹಾಗೂ ಸರಳ ಪ್ರಯೋಗಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು ಹಾಗೂ ಅವುಗಳ ಕುರಿತು ಕಿರುಮಾಹಿತಿ ನೀಡಿದರು
ಶಿಕ್ಷಕರು ವಿಜ್ಞಾನ ದಿನಾಚರಣೆಯ ಹಿನ್ನೆಲೆ ಮಹತ್ವದ ಕುರಿತು ವಿವರಿಸಿದರು ಇದು ಪ್ರಖ್ಯಾತ ಭೌತ ವಿಜ್ಞಾನಿ ಸರ್ ಸಿ ವಿ ರಾಮನ್ ತಮ್ಮ ರಾಮನ್ ಎಫೆಕ್ಟ್ ಮಂಡಿಸಿದ ದಿನ ಎಂಬ ಮಾಹಿತಿ ನೀಡಿದರು ಮಕ್ಕಳು ಸುತ್ತಲಿನ ಪರಿಸರ ಹಾಗೂ ಸನ್ನಿವೇಶಗಳಿಂದಲೇ ಪ್ರಾಯೋಗಿಕವಾಗಿ ವಿಜ್ಞಾನವನ್ನು ಕಲಿಯಬೇಕು ಏಕೆ ಹೇಗೆ ಎಂಬ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಸರಳ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕು ಎಂಬ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಸಹ ಶಿಕ್ಷಕರು ಹಾಜರಿದ್ದು ಸೂಕ್ತ ಮಾರ್ಗದರ್ಶನ ನೀಡಿದರು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ