ಸಾರ್ವಜನಿಕ ಶಿಕ್ಷಣ ಇಲಾಖೆ
ಶಿರಸಿ ಶೈ.ಜಿಲ್ಲೆ (ಉ.ಕ.)
INAUGURATION PROGRAM OF TEACHMINT APP BASED ONLINE CLASS
ಮಾನ್ಯ ಕಾರ್ಮಿಕ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ ರವರು ಜಿಲ್ಲಾ ಮಟ್ಟದ ಆನ್ಲೈನ್ ತರಗತಿಗಳ ಅಧಿಕೃತ ಉದ್ಘಾಟನಾ ಕಾರ್ಯಕ್ರಮವನ್ನು ಯಲ್ಲಾಪುರದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿಸಿದರು.
ಡಿ.ಡಿ.ಪಿ.ಐ. ಶ್ರೀ ದಿವಾಕರ ಶೆಟ್ಟಿ, ಬಿ.ಇ.ಒ. ಶ್ರೀ ಎನ್.ಆರ್.ಹೆಗಡೆ, ಬಿ.ಆರ್.ಸಿ ಸಮನ್ವಯಾಧಿಕಾರಿ ಶ್ರೀ ಶ್ರೀರಾಮ ಹೆಗಡೆ, ಪ.ಪಂ ಮಾಜಿ ಅಧ್ಯಕ್ಷ ಶ್ರೀ ಶಿರೀಷ ಪ್ರಭು ಇತರರು ಉಪಸ್ಥಿತರಿದ್ದರು.
ಕರೋನಾ ಕಾಲದಲ್ಲಿ ನಮ್ಮ ಮಕ್ಕಳನ್ನ ಉಳಿಸಿಕೊಳ್ಳಬೇಕಾಗಿದೆ, ಅದಕ್ಕೆ ಆನ್ಲೈನ್ ತರಗತಿಗಳು ಸಹಾಯಕಾರಿಯಾಗಿದೆ ಎಂದು ಮಾನ್ಯ ಸಚಿವರು ನುಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಉಪ ನಿರ್ದೇಶಕರು ವಿದ್ಯಾರ್ಥಿಗಳು ಅತಿ ಹೆಚ್ಚು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಸೇತುಬಂದದ ಪ್ರಥಮ ತರಗತಿಯು 6 ನೇ ತರಗತಿ ವಿದ್ಯಾರ್ಥಿಗಳಿಗೆ ನೆರವೇರಿತು.
ಆನ್ಲೈನ್ ತರಗತಿ ಅನುಷ್ಠಾನದ ಸಲುವಾಗಿ ಮೂರು ಹಂತದ ತರಬೇತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡು ಈಗಾಗಲೇ ತಾಲೂಕಿನ ಎಲ್ಲಾ ಶಿಕ್ಷಕರಿಗೆ ನೀಡಲಾಗಿದ್ದು, ಶಾಲೆಯ ಮುಖ್ಯ ಶಿಕ್ಷಕರಿಗೆ, ಸಂಪನ್ಮೂಲ ಶಿಕ್ಷಕರಿಗೆ, ಹಾಗು ಎಲ್ಲಾ ಶಿಕ್ಣಕರಿಗೆ ಆನ್ಲೈನ್ ಮತ್ತು ಆಫ್‌ಲೈನ್ ಮುಖಾಂತರ ತರಬೇತಿ ನೀಡಲಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆ ತಿಳಿಸಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್ .ಆರ್.ಹೆಗಡೆಯವರು ಎಲ್ಲರನ್ನು ಸ್ವಾಗತಿಸಿದರು.
ಬಿ.ಆರ್.ಪಿ. ಶ್ರೀ ಸಂತೋಷ ನಾಯ್ಕ ನಿರೂಪಿಸಿದರು. ಶ್ರೀ ಪ್ರಶಾಂತ ಪಟಗಾರ ಬಿ.ಆರ್.ಪಿ.(ಪ್ರೌಢ) ನಿರ್ವಹಿಸಿದರು. ಶ್ರೀ ಸಂತೋಷ ಜಿಗಳೂರ, ಶ್ರೀ ಸದಾನಂದ ಪಟಗಾರ, ಬಿ.ಆರ್.ಪಿ. ಗಳು, ತಾಲೂಕಿನ ಎಲ್ಲಾ ಸಿ.ಆರ್.ಪಿಗಳು ಸಹಕರಿಸಿದರು.ಆನ್ಲೈನ್ ತರಗತಿಯಲ್ಲಿ 191 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ