ಸೋಮವಾರ, ಜೂನ್ 28, 2021

Science art at school GHS BISGOD,YELLAPUR, SIRSI EDN DIST (UTTARA KANNADA)

 ಬೇಳೆಕಾಳುಗಳು ದಾರ ಹೂವು ಕಾಗದ ರಂಗೋಲಿಗಳಲ್ಲಿ ಮೂಡಿಬಂದ ವಿಜ್ಞಾನ ಚಿತ್ರಗಳು. ಶಿಕ್ಷಕರ ಮಾರ್ಗದರ್ಶನದಿ ಮೂಡಿಬಂತು ಕ್ರಿಯಾಶೀಲ ಚಟುವಟಿಕೆ. 

ಕಲಿಕೆಗಾಗಿ ವಿಜ್ಞಾನ ಚಿತ್ರಗಳು ಎಂಬ ವಿನೂತನ ಸ್ಪರ್ಧಾ ಕಾರ್ಯಕ್ರಮವನ್ನು ಯಲ್ಲಾಪುರ ಸರಕಾರಿ ಪ್ರೌಢಶಾಲೆ ಬಿಸಗೋಡನ SSLC ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕರು ಸದಾನಂದ ದಬಗಾರ ಏರ್ಪಡಿಸಿದ್ದರು.



ಲಾಕ್ ಡೌನ್ ನಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರಂತರವಾಗಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ 10ನೇ ತರಗತಿಯಲ್ಲಿ ಪರೀಕ್ಷೆಗೆ ನಿಗದಿಪಡಿಸಿದ ವಿಜ್ಞಾನ ಚಿತ್ರಗಳ ಸ್ಪರ್ಧೆ ಅದಾಗಿತ್ತು ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ಸೂಚನೆಗಳನ್ನು ನೀಡಿ,  ಒಂದು ವಾರದ ಅವಧಿಯಲ್ಲಿ  ಚಿತ್ರ ಬಿಡಿಸಲು ಬಳಸಿದ ವಸ್ತುಗಳ ಮಾಹಿತಿಯೊಂದಿಗೆ ಫೋಟೋ ಕಳಿಸಲು ಒಂದು ವಾರದ ಅವಕಾಶ ಕಲ್ಪಿಸಿಕೊಡಲಾಗಿತ್ತು 



ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿ ಪ್ರಯತ್ನ ಮಾಡಿದ್ದರು…ಸ್ಪರ್ಧೆಯಲ್ಲಿ ಒಟ್ಟು 28 ಭಾಗವಹಿಸಿದ್ದರು. ಬೇಳೆ ಕಾಳುಗಳಿಂದ ತಯಾರಿಸಿದ ಮೂತ್ರ ಜನಕಾಂಗ, ಹೃದಯ , ನರಕೋಶ, ಎಲೆಗಳನ್ನು ಬಳಸಿ ತಯಾರಿಸಿದ  ಮೂತ್ರಜನಕಾಂಗ, ಹೃದಯ, ಡೈನೇಮೋ ಹೂವಿನ ಭಾಗಗಳನ್ನು ಬಳಸಿ ಹೂವು, ಹೃದಯ, ಶಲಾಕಾಗ್ರದ ಮೇಲೆ ಮೊಳೆಯುತ್ತಿರುವ ಪರಾಗ , ದಾರವನ್ನು ಬಳಸಿ  ತಯಾರಿಸಿದ ಹೃದಯ , ಕಾಗದ ಕತ್ತರಿಸಿ ತಯಾರಿಸಿದ ಮೆದುಳು  ಹೀಗೆ ವಿಭಿನ್ನ ರೀತಿಯ ಚಿತ್ರಗಳನ್ನು ಕೊಟ್ಟಿದ್ದರು.ಕೆಲವು ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಕಳುಹಿಸಿ ಕೊಟ್ಟಿದ್ದರು.  ಬೇರೆಬೇರೆ ಶಾಲೆಯ ಶಿಕ್ಷಕರು ಹಾಗೂ ಉಪನ್ಯಾಸಕರು ಉತ್ತಮವಾದ ಚಿತ್ರಗಳನ್ನು ಆಯ್ಕೆ ಮಾಡಿಕೊಟ್ಟರು. ಭಾಗವಹಿಸಿದವರಿಗೆಲ್ಲ  ಡಿಜಿಟಲ್ ಪ್ರಮಾಣಪತ್ರ ಹಾಗೂ ಅತ್ಯುತ್ತಮ ಚಿತ್ರಗಳಿಗೆ ಶಾಲೆ ಭೌತಿಕವಾಗಿ ಪ್ರಾರಂಭವಾದ ನಂತರ ಬಹುಮಾನಗಳನ್ನು ನೀಡಲಾಗುತ್ತದೆ. ಶಾಲೆಯ ಮುಖ್ಯಾಧ್ಯಾಪಕರು ವಿದ್ಯಾರ್ಥಿಗಳು ಪಾಲಕರು ವಿನೂತನ ಕಾರ್ಯಕ್ಕೆ ಸೈ ಎಂದಿದ್ದಾರೆ.

1 ಕಾಮೆಂಟ್‌:

ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate