ಚುನಾವಣಾ ಸಾಕ್ಷರತಾ ಕ್ಲಬ್ ನ ವಿವಿಧ ಸ್ಪರ್ಧೆಗಳು ನಡೆದವು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಚುನಾವಣಾ ಸಾಕ್ಷರತಾ ಕ್ಲಬ್ ಯಲ್ಲಾಪುರ, ಸಮಾಜ ವಿಜ್ಞಾನ ಸಂಘ ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಯಲ್ಲಾಪುರ ತಾಲೂಕಾ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯ.ತಾ.ಶಿ.ಸ.ಯಲ್ಲಾಪುರದ ಆವಾರದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಯಲ್ಲಾಪುರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್ ಆರ್ ಹೆಗಡೆಯವರು ಮಾತನಾಡಿ “ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ನ ಕಾರ್ಯಗಳು ಹಾಗೂ ಅದರ ಉದ್ದೇಶಗಳ ಕುರಿತು ವಿವರಿಸಿದರು.
ಯಲ್ಲಾಪುರ ತಾಲೂಕಾ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ಚುನಾವಣಾ ಸಾಕ್ಷರತಾ ಕ್ಲಬ್ ಗಳ ತಾಲೂಕಾ ಮಟ್ಟದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸ್ಪರ್ಧೆಗಳ ಕುರಿತು ವಿವರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಜಗದೀಶ ಕಮ್ಮಾರ ಅವರು ಮಾತನಾಡಿ “ ಪ್ರಜ್ಞಾವಂತ ನಾಗರಿಕನು ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲ.ಶಾಲಾ ಹಂತಗಳಿಂದಲೇ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲು ಸಾಧ್ಯ. ಈ ಉದ್ದೇಶಕ್ಕಾಗಿಯೇ ಶಾಲಾ ಹಂತಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಗಳನ್ನು ಸ್ಥಾಪಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತಿದೆ “ ಎಂದರು.ಕಾರ್ಯಕ್ರಮದಲ್ಲಿ ಯ.ತಾ.ಶಿ.ಸ.ಯಲ್ಲಾಪುರದ
ಮುಖ್ಯಾಧ್ಯಾಪಕರಾದ ಶ್ರೀ ಎನ್ ಎಸ್ ಭಟ್ ಅವರು ಸ್ವಾಗತಿಸಿದರೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ಪಟಗಾರ ಅವರು ವಂದಿಸಿದರು.ಶಿಕ್ಷಕರಾದ ಶ್ರೀ ವಿನೋದ ಭಟ್ಟ ಅವರು ನಿರ್ವಹಿಸಿದರು.ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಾ ಸಮಾಜ ವಿಜ್ಞಾನ ಸಂಘದ ವಿವಿಧ ಪದಾಧಿಕಾರಿಗಳಾದ ಶ್ರೀಮತಿ ನಾಗರತ್ನ ನಾಯಕ, ಸ.ಪ್ರೌ.ಶಾಲೆ ಯಲ್ಲಾಪುರ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಹೆಗಡೆ, ವಿಶ್ವದರ್ಶನ ಪ್ರೌಢ ಶಾಲೆ ಇಡಗುಂದಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ಇಂತಿದೆ:-
ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಶ್ರಾವಣಿ ಆಚಾರಿ ಸರ್ಕಾರಿ ಪ್ರೌಢಶಾಲೆ ನಂದೊಳ್ಳಿ ಪ್ರಥಮ, ಅನಂತ ಗುನಗಾ, ವಾಯ್.ಟಿ.ಎಸ್.ಎಸ್ ಪ್ರೌಢಶಾಲೆ ಯಲ್ಲಾಪುರ ದ್ವಿತೀಯ
ಪ್ರಜ್ವಲ ದೇವಳಿ ಸರ್ಕಾರಿ ಪ್ರೌಢಶಾಲೆ ಬಿಸಗೋಡ ತೃತೀಯ ಸ್ಥಾನ ಪಡೆದರು
ಪ್ರಬಂಧ(ಕನ್ನಡ) ಸ್ಪರ್ಧೆಯಲ್ಲಿ ಶ್ವೇತಾ ಗಾಂವ್ಕರ್ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ ಪ್ರಥಮ,
ಸುಮೇಧಾ ಗಾಂವ್ಕರ್ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ ದ್ವಿತೀಯ,
ಸಂಜನಾ ಪೂಜಾರಿ ಸರ್ಕಾರಿ ಪ್ರೌಢಶಾಲೆ ಬಿಸಗೋಡ ಮತ್ತು ಬಮ್ಮಿಬಾಯಿ ಜೋರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುರ ತೃತೀಯ ಸ್ಥಾನ ಪಡೆದರು.
ಪ್ರಬಂಧ(ಇಂಗ್ಲೀಷ್) ಸ್ಪರ್ಧೆಯಲ್ಲಿ ಅನುಜ್ಞಾ ಗಾಂವ್ಕರ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರ ಪ್ರಥಮ, ಸಿಂಚನಾ ಭಟ್ಟ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರ ದ್ವಿತೀಯ ಸ್ಥಾನ ಪಡೆದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿನ್ಮಯ ದುಂಡಿ ಸರ್ಕಾರಿ ಪ್ರೌಢಶಾಲೆ ಯಲ್ಲಾಪುರ ಪ್ರಥಮ, ಸುಜಿತ್ ಭಟ್ಟ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ ದ್ವಿತೀಯ, ಪ್ರಥಮ ಭಟ್ಟ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರ ಮತ್ತು
ಭಾವನಾ ಕೆರೆಹೊಸುರ ಕೆ.ಪಿ.ಎಸ್ ಕಿರವತ್ತಿ ಇವರುಗಳು ತೃತೀಯ ಸ್ಥಾನ ಪಡೆದರು.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ