ಸದರಿ ಕಾರ್ಯಕ್ರಮದ ರೂವಾರಿಗಳಾದ ಶ್ರೀ ಎನ್ ಆರ್ ಹೆಗಡೆ, ಯಲ್ಲಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ತಾಲೂಕಿನ ಎಲ್ಲಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಈ ಕುರಿತಾದ ಎರಡು ಪೂರ್ವಭಾವಿ ಸಭೆಗಳನ್ನ ತೆಗೆದುಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು. ಅದರಂತೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ತಮ್ಮ ಕ್ಲಸ್ಟರ್ ಹಂತದಲ್ಲಿ ಮುಖ್ಯ ಶಿಕ್ಷಕರ ಸಭೆಗಳನ್ನ ಮಾಡಿ ಇದರ ಕುರಿತು ತಿಳಿಸಿ ಯಶಸ್ವಿಯಾಗಲು ಮುನ್ನುಡಿ ಬರೆದರುಮುಖ್ಯ ಶಿಕ್ಷಕರ ಮೂಲಕ ಶಿಕ್ಷಕರಿಗೆ ಕಲಿಕಾ ಕಾರಂಜಿಯ ಕುರಿತು ಮಾರ್ಗದರ್ಶನವನ್ನು ನೀಡಿ ಈ ಕಾರ್ಯಕ್ರಮ ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಲು ಕಾರ್ಣಿಕರ್ತರಾದರು ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವ ರೀತಿ ಪ್ರದರ್ಶಿಸಲ್ಪಡುತ್ತದೆಯೋ ಅದೇ ರೀತಿ ಕಲಿಕಾ ಕಾರಂಜಿ ಎನ್ನುವುದು ವಿದ್ಯಾರ್ಥಿಯ ಕಲಿಕೆಯನ್ನು ಖಾತರಿಪಡಿಸಲು ಇರುವುದರಿಂದ ವಿದ್ಯಾರ್ಥಿಗಳು ಎಲ್ಲಾ ಸಿದ್ಧತೆಗಳೊಂದಿಗೆ ಬಂದು ತಮ್ಮ ಕಲಿಕೆಯನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವು ಸರಕಾರದ ಯಾವುದೇ ರೀತಿಯಾದಂತಹ ಅನುದಾನಗಳಿಲ್ಲದೆ ನಡೆಯುತ್ತಿರುವುದರಿಂದ ಕ್ಲಸ್ಟರ್ ಹಂತದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಲಯದಲ್ಲಿನ ಶಿಕ್ಷಕರ ಸಹಕಾರದೊಂದಿಗೆ ಶಾಲಾ ಎಸ್.ಡಿ.ಎಂ.ಸಿ.ಯವರ ಸಹಕಾರದೊಂದಿಗೆ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೇದಿಕೆಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.
ಶುಕ್ರವಾರ, ನವೆಂಬರ್ 25, 2022
ಕಲಿಕಾ ಕಾರಂಜಿ
ಶಿರಸಿ ಶೈಕ್ಷಣಿಕ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಲಿಕಾ ಚೇತರಿಕೆ ಅಡಿಯಲ್ಲಿ ನಡೆಯುತ್ತಿರುವ ಪಠ್ಯಕ್ರಮದ ಯಶೋಗಾಥೆಯನ್ನು ಸಮಾಜದ ಮುಂದೆ ತೆರೆದಿಡುವ ನಿಟ್ಟಿನಲ್ಲಿ ಕಲಿಕಾ ಕಾರಂಜಿ ತಾಲೂಕಿನಲ್ಲಿ ದಿನಾಂಕ: 23.11.2022 ರಿಂದ 25.11.2022 ರವರೆಗೆ ವಿವಿಧ ಕ್ಲಸ್ಟರ್ಗಳಲ್ಲಿ ಆಯೋಜನೆಗೊಂಡಿತ್ತು. ಮೊದಲ ಹಂತವಾಗಿ ಪ್ರತಿ ಶಾಲೆಗಳಲ್ಲಿ ಕಲಿಕಾಫಲವನ್ನ ಆದರಿಸಿ ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನವನ್ನು ನಡೆಸಲಾಗಿತ್ತು. ಮುಂದುವರೆದು ಶಾಲೆಗಳಲ್ಲಿನ ಅತ್ಯುತ್ತಮ ಕಲಿಕಾಫಲ ಆಧಾರಿತ ಪ್ರದರ್ಶನಗಳನ್ನ ಕ್ಲಸ್ಟರ್ ಹಂತದಲ್ಲಿ ಪ್ರದರ್ಶನ ಮಾಡಿಸುವ ಸಲುವಾಗಿ ತಾಲೂಕಿನ ಎಲ್ಲಾ ಕ್ಲಸ್ಟರ್ಗಳಲ್ಲಿ ಸಿ.ಆರ್.ಪಿ.ಗಳ ನೇತೃತ್ವದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಅತ್ಯುತ್ತಮವಾಗಿ ಆಯೋಜನೆಗೊಂಡು ಪಾಲಕರ, ಎಸ್.ಡಿ.ಎಂ.ಸಿ.ಗಳ ಮನವನ್ನು ಗೆದ್ದಿತು. ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನ ಎಲ್ಲರ ಎದುರು ಪ್ರಸ್ತುತಪಡಿಸಿದರು. ನಲಿ-ಕಲಿಯ ವಿದ್ಯಾರ್ಥಿಗಳಿಂದ ಹಿಡಿದು ಏಳನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಓದುವ ಕಲೆ, ಗಣಿತದ ಮೌಖಿಕ ಬಾಯ್ದೆರೆ ಲೆಕ್ಕಗಳು, ಕನ್ನಡ/ ಇಂಗ್ಲೀಷ/ ಹಿಂದಿ ಸಂವಹನ ಕಲೆಗಳು,ಎಲ್ಲಾ ಭಾಷೆಗಳ ನಾಟಕಗಳು, ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆಗಳು, ಚುಟು ಸಂವಾದಗಳು, ನಕಾಶೆಯ ಬಳಕೆ, ಸ್ಥಳ ಗುರುತಿಸುವಿಕೆ, ಐತಿಹಾಸಿಕ ಘಟನೆಗಳು ಪ್ರಸ್ತುತ ಪಡಿಸುವಿಕೆ, ರಸಪ್ರಶ್ನೆಗಳು, ಭಾಷಣಗಳು, ಆಶುಭಾಷಣಗಳು, ಕವಿತೆಗಳ ಪ್ರಸ್ತುತಿ ಹೀಗೆ ಇತ್ಯಾದಿ ತರಗತಿವಾರು ಹಾಗು ಕಲಿಕಾಫಲವಾರು ಕಾರ್ಯಕ್ರಮಗಳು ಆಯೋಜನೆಗೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹವನ್ನು ಹೆಚ್ಚಿಸುವಂತೆ ಮಾಡಿತು. ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತಮ್ಮ ಇಂಗ್ಲಿಷ್ ಜ್ಞಾನವನ್ನು ಚರ್ಚೆಗಳಲ್ಲಿ, ಸಂವಹನಗಳಲ್ಲಿ, ನಾಟಕಗಳಲ್ಲಿ ಪ್ರದರ್ಶನ ಮಾಡುವ ಮೂಲಕ ನಮ್ಮ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಅತ್ಯುತ್ತಮವಾಗಿದೆ ಎಂದು ಸಾದರಪಡಿಸಿದರು. ವಿದ್ಯಾರ್ಥಿಗಳು ತಮ್ಮ ಕಲಿಕಾ ಫಲಗಳನ್ನು ಪ್ರದರ್ಶಿಸುವ ಮೊದಲು ತಮ್ಮ ಸ್ವಂತ ಪರಿಚಯವನ್ನು ಮಾಡಿಕೊಂಡಾಗಲೇ ಪಾಲಕರಿಗೆ ಇದು ಮನಮುಟ್ಟಿತ್ತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ