2021-22ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ
2021-22ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ದಿನಾಂಕ.01.07.2021ರಂದು ಎಲ್ಲಾ ಶಾಲೆಗಳಲ್ಲಿ ಆಚರಿಸಬೇಕಾಗಿದ್ದು ಅದರ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಎಸ್.ಡಿ.ಎಂ.ಸಿ.ಯವರು ಹಾಗೂ ಪೋಷಕರ ಸಹಕಾರದೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮವನ್ನು ನಡೆಸುವುದು( ಆದರೆ ಮಕ್ಕಳಿಗೆ ಅವಕಾಶ ಇರುವುದಿಲ್ಲ).
Ø ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಆನ್ ಲೈನ್/ಆಫ್ ಲೈನ್ ನಲ್ಲಿ ತರಗತಿಗಳನ್ನು ಕಡ್ಡಾಯವಾಗಿ ಪ್ರಾರಂಭಿಸುವದು.
Ø ವೇಳಾಪಟ್ಟಿ, ಆನ್ ಲೈನ್ ಹಾಜರಾತಿ ನಿರ್ವಹಿಸುವುದು.
Ø DSERT ಯಿಂದ ನೀಡಲಾದ ಸೇತುಬಂಧ ಸಾಮರ್ಥ್ಯ/ಕಲಿಕಾ ಚಟುವಟಿಕೆಗಳನ್ನು ಅನುಸರಿಸುವುದು.
Ø ಶಾಲಾ ಪ್ರಾರಂಭೋತ್ಸವದ ಫೋಟೊಗಳನ್ನು ಸಿ.ಆರ್.ಪಿ. ಗಳ ಮೂಲಕ ಕಳುಹಿಸುವುದು.
Ø ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ನಾಳೆ ಪೂರ್ಣಗೊಳಿಸಿ SATS ನಲ್ಲಿ update ಮಾಡುವುದು.
Ø ಇಲಾಖೆಯಿಂದ ನೀಡಲಾದ ಸೂಚನೆಗಳನ್ನು ತಪ್ಪದೇ ಅನುಸರಿಸುವುದು.
ಶ್ರೀ ಎನ್.ಆರ್.ಹೆಗಡೆ.
ಬಿ.ಇ.ಒ. ಯಲ್ಲಾಪುರ
ಶಿರಸಿ ಶೈಕ್ಷಣಿಕ ಜಿಲ್ಲೆ(ಉ.ಕ.)
ಶಾಲೆ ಇರುವ ಊರಿನಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳು ಇದ್ದಲ್ಲಿ ,ಜನರನ್ನು ಕರೆಯಿಸಬೇಕಾ?
ಪ್ರತ್ಯುತ್ತರಅಳಿಸಿ