ಇವತ್ತು ಬಿ.ಆರ್.ಸಿ. ಯಲ್ಲಾಪುರ ಇಲ್ಲಿ ತಾಲೂಕಿನ ಎಲ್ಲಾ ಮಾರ್ಗದರ್ಶಕರ ಸಭೆ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್.ಆರ್. ಹೆಗಡೆಯವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ಸಭೆಯ ವಿಷಯ ಮಂಡನೆ ಮಾಡಿದರು. ಬಿ.ಆರ್.ಪಿ. ಶ್ರೀ ಸದಾನಂದ ಪಟಗಾರ ರವರು ಶಾಲಾ ಸಿದ್ಧಿ ಕಾರ್ಯಕ್ರಮ ಅನುಷ್ಟಾನದ ಕುರಿತು ಮಾಹಿತಿ ತಿಳಿಸಿದರು.
ಕೊರೋನಾ ಕಾಲದಲ್ಲಿ ಉಂಟಾದ ತೊಂದರೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿ. ನಾವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು
ಶ್ರೀ ಸಂತೋಷ ನಾಯ್ಕ ರವರು ಶಾಲೆಗೆ ದಾಖಲಾಗದ ವಿದ್ಯಾರ್ಥಿ ವಿವರ ನೀಡಿ ಸಿ.ಆರ್.ಪಿ.ಗಳು ಈ ಕುರಿತು ಶಾಲೆಗಳಿಂದ ಕ್ರಮಕೈಗೊಳ್ಳಲು ತಿಳಿಸಿದರು.
ನಿಷ್ಟಾ ಕಾರ್ಯಕ್ರಮದ ಬಾಕಿ ಶಿಕ್ಷಕರ ಕುರಿತು ಬಿ.ಆರ್.ಪಿ. ಶ್ರೀಮತಿ ಉಷಾ ನಾಯಕ ತಿಳಿಸಿದರು
ಅಕ್ಷರ ದಾಸೋಹ ಕಾರ್ಯಕ್ರಮದ ಉಪಯೋಗಿತ ಪ್ರಮಾಣ ಪತ್ರ ಕೆಲವು ಶಾಲೆಗಳವರು ನೀಡಿಲ್ಲ, ಬೇಡಿಕೆಯನ್ನು ಗೂಗಲ್ ಫಾರಂನಲ್ಲಿ ಕೆಲವು ಶಾಲೆಗಳವರು ನೀಡದೇ ಇರುವುದರಿಂದ ಅಂತಿಮ ಬೇಡಿಕೆ ಪತ್ರ ತಯಾರಿಸಲು ತೊಂದರೆಯಾಗುತ್ತಿದೆ ತಕ್ಷಣ ಕ್ರಮವಹಿಸಲು ಸಿ.ಆರ್.ಪಿ.ಗಳಿಗೆ ತಿಳಿಸಿದರು.
ಸಮವಸ್ತ್ರ ವಿತರಣೆ ಕುರಿತು ಮಾಹಿತಿಯನ್ನ ಇ.ಸಿ.ಒ. ಶ್ರೀ ಪ್ರಶಾಂತ ಜಿ.ಎನ್.ರವರು ನೀಡಿದರು.
ಎಲ್ಲಾ ಸಿ.ಆರ್.ಪಿ.ಗಳು ಹಾಜರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ