ಶುಕ್ರವಾರ, ನವೆಂಬರ್ 25, 2022

ಕಲಿಕಾ ಕಾರಂಜಿ

ಶಿರಸಿ ಶೈಕ್ಷಣಿಕ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಲಿಕಾ ಚೇತರಿಕೆ ಅಡಿಯಲ್ಲಿ ನಡೆಯುತ್ತಿರುವ ಪಠ್ಯಕ್ರಮದ ಯಶೋಗಾಥೆಯನ್ನು ಸಮಾಜದ ಮುಂದೆ ತೆರೆದಿಡುವ ನಿಟ್ಟಿನಲ್ಲಿ ಕಲಿಕಾ ಕಾರಂಜಿ ತಾಲೂಕಿನಲ್ಲಿ ದಿನಾಂಕ: 23.11.2022 ರಿಂದ 25.11.2022 ರವರೆಗೆ ವಿವಿಧ ಕ್ಲಸ್ಟರ್ಗಳಲ್ಲಿ ಆಯೋಜನೆಗೊಂಡಿತ್ತು.  ಮೊದಲ ಹಂತವಾಗಿ ಪ್ರತಿ ಶಾಲೆಗಳಲ್ಲಿ ಕಲಿಕಾಫಲವನ್ನ ಆದರಿಸಿ ವಿದ್ಯಾರ್ಥಿಗಳ ಕಲಿಕಾ ಪ್ರದರ್ಶನವನ್ನು ನಡೆಸಲಾಗಿತ್ತು.  ಮುಂದುವರೆದು ಶಾಲೆಗಳಲ್ಲಿನ ಅತ್ಯುತ್ತಮ ಕಲಿಕಾಫಲ ಆಧಾರಿತ ಪ್ರದರ್ಶನಗಳನ್ನ ಕ್ಲಸ್ಟರ್ ಹಂತದಲ್ಲಿ ಪ್ರದರ್ಶನ ಮಾಡಿಸುವ ಸಲುವಾಗಿ ತಾಲೂಕಿನ ಎಲ್ಲಾ ಕ್ಲಸ್ಟರ್ಗಳಲ್ಲಿ ಸಿ.ಆರ್‌.ಪಿ.ಗಳ ನೇತೃತ್ವದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಅತ್ಯುತ್ತಮವಾಗಿ ಆಯೋಜನೆಗೊಂಡು ಪಾಲಕರ, ಎಸ್‌.ಡಿ.ಎಂ.ಸಿ.ಗಳ ಮನವನ್ನು ಗೆದ್ದಿತು. ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನ ಎಲ್ಲರ ಎದುರು ಪ್ರಸ್ತುತಪಡಿಸಿದರು. ನಲಿ-ಕಲಿಯ ವಿದ್ಯಾರ್ಥಿಗಳಿಂದ ಹಿಡಿದು ಏಳನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಓದುವ ಕಲೆ, ಗಣಿತದ ಮೌಖಿಕ ಬಾಯ್ದೆರೆ ಲೆಕ್ಕಗಳು, ಕನ್ನಡ/ ಇಂಗ್ಲೀಷ/ ಹಿಂದಿ ಸಂವಹನ ಕಲೆಗಳು,ಎಲ್ಲಾ ಭಾಷೆಗಳ ನಾಟಕಗಳು, ವಿಜ್ಞಾನ ಪ್ರಯೋಗ ಪ್ರಾತ್ಯಕ್ಷಿಕೆಗಳು, ಚುಟು ಸಂವಾದಗಳು, ನಕಾಶೆಯ ಬಳಕೆ, ಸ್ಥಳ ಗುರುತಿಸುವಿಕೆ, ಐತಿಹಾಸಿಕ ಘಟನೆಗಳು ಪ್ರಸ್ತುತ ಪಡಿಸುವಿಕೆ, ರಸಪ್ರಶ್ನೆಗಳು, ಭಾಷಣಗಳು, ಆಶುಭಾಷಣಗಳು, ಕವಿತೆಗಳ ಪ್ರಸ್ತುತಿ ಹೀಗೆ ಇತ್ಯಾದಿ ತರಗತಿವಾರು ಹಾಗು ಕಲಿಕಾಫಲವಾರು  ಕಾರ್ಯಕ್ರಮಗಳು ಆಯೋಜನೆಗೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಉತ್ಸಾಹವನ್ನು ಹೆಚ್ಚಿಸುವಂತೆ ಮಾಡಿತು. ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತಮ್ಮ ಇಂಗ್ಲಿಷ್ ಜ್ಞಾನವನ್ನು ಚರ್ಚೆಗಳಲ್ಲಿ, ಸಂವಹನಗಳಲ್ಲಿ, ನಾಟಕಗಳಲ್ಲಿ ಪ್ರದರ್ಶನ ಮಾಡುವ ಮೂಲಕ ನಮ್ಮ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಅತ್ಯುತ್ತಮವಾಗಿದೆ ಎಂದು ಸಾದರಪಡಿಸಿದರು. ವಿದ್ಯಾರ್ಥಿಗಳು ತಮ್ಮ ಕಲಿಕಾ ಫಲಗಳನ್ನು ಪ್ರದರ್ಶಿಸುವ ಮೊದಲು ತಮ್ಮ ಸ್ವಂತ ಪರಿಚಯವನ್ನು ಮಾಡಿಕೊಂಡಾಗಲೇ ಪಾಲಕರಿಗೆ ಇದು ಮನಮುಟ್ಟಿತ್ತು.

ಸದರಿ ಕಾರ್ಯಕ್ರಮದ ರೂವಾರಿಗಳಾದ ಶ್ರೀ ಎನ್ ಆರ್ ಹೆಗಡೆ, ಯಲ್ಲಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ತಾಲೂಕಿನ ಎಲ್ಲಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ ಈ ಕುರಿತಾದ ಎರಡು ಪೂರ್ವಭಾವಿ ಸಭೆಗಳನ್ನ ತೆಗೆದುಕೊಂಡು ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು. ಅದರಂತೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ತಮ್ಮ ಕ್ಲಸ್ಟರ್ ಹಂತದಲ್ಲಿ ಮುಖ್ಯ ಶಿಕ್ಷಕರ ಸಭೆಗಳನ್ನ ಮಾಡಿ ಇದರ ಕುರಿತು ತಿಳಿಸಿ ಯಶಸ್ವಿಯಾಗಲು ಮುನ್ನುಡಿ ಬರೆದರುಮುಖ್ಯ ಶಿಕ್ಷಕರ ಮೂಲಕ ಶಿಕ್ಷಕರಿಗೆ ಕಲಿಕಾ ಕಾರಂಜಿಯ ಕುರಿತು ಮಾರ್ಗದರ್ಶನವನ್ನು ನೀಡಿ ಈ ಕಾರ್ಯಕ್ರಮ ತಾಲೂಕಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಲು ಕಾರ್ಣಿಕರ್ತರಾದರು ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವ ರೀತಿ ಪ್ರದರ್ಶಿಸಲ್ಪಡುತ್ತದೆಯೋ ಅದೇ ರೀತಿ ಕಲಿಕಾ ಕಾರಂಜಿ ಎನ್ನುವುದು ವಿದ್ಯಾರ್ಥಿಯ ಕಲಿಕೆಯನ್ನು ಖಾತರಿಪಡಿಸಲು ಇರುವುದರಿಂದ ವಿದ್ಯಾರ್ಥಿಗಳು ಎಲ್ಲಾ ಸಿದ್ಧತೆಗಳೊಂದಿಗೆ ಬಂದು ತಮ್ಮ ಕಲಿಕೆಯನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವು ಸರಕಾರದ ಯಾವುದೇ ರೀತಿಯಾದಂತಹ ಅನುದಾನಗಳಿಲ್ಲದೆ ನಡೆಯುತ್ತಿರುವುದರಿಂದ ಕ್ಲಸ್ಟರ್ ಹಂತದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಲಯದಲ್ಲಿನ ಶಿಕ್ಷಕರ ಸಹಕಾರದೊಂದಿಗೆ ಶಾಲಾ ಎಸ್‌.ಡಿ.ಎಂ.ಸಿ.ಯವರ ಸಹಕಾರದೊಂದಿಗೆ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೇದಿಕೆಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. 


ಬುಧವಾರ, ನವೆಂಬರ್ 23, 2022

ತಾಲೂಕಾ ಚುನಾವಣಾ ಸಾಕ್ಷರತಾ ಕ್ಲಬ್ ಸ್ಫರ್ಧೆಗಳು

 ಚುನಾವಣಾ ಸಾಕ್ಷರತಾ ಕ್ಲಬ್ ನ ವಿವಿಧ ಸ್ಪರ್ಧೆಗಳು ನಡೆದವು.


ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಚುನಾವಣಾ ಸಾಕ್ಷರತಾ ಕ್ಲಬ್ ಯಲ್ಲಾಪುರ, ಸಮಾಜ ವಿಜ್ಞಾನ ಸಂಘ ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಯಲ್ಲಾಪುರ ತಾಲೂಕಾ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ  ಯ.ತಾ.ಶಿ.ಸ.ಯಲ್ಲಾಪುರದ ಆವಾರದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಯಲ್ಲಾಪುರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್ ಆರ್ ಹೆಗಡೆಯವರು ಮಾತನಾಡಿ “ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ನ ಕಾರ್ಯಗಳು ಹಾಗೂ ಅದರ ಉದ್ದೇಶಗಳ ಕುರಿತು ವಿವರಿಸಿದರು.


ಯಲ್ಲಾಪುರ ತಾಲೂಕಾ ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ಚುನಾವಣಾ ಸಾಕ್ಷರತಾ ಕ್ಲಬ್ ಗಳ ತಾಲೂಕಾ ಮಟ್ಟದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸ್ಪರ್ಧೆಗಳ ಕುರಿತು ವಿವರ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಜಗದೀಶ ಕಮ್ಮಾರ ಅವರು ಮಾತನಾಡಿ “ ಪ್ರಜ್ಞಾವಂತ ನಾಗರಿಕನು ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲ.ಶಾಲಾ ಹಂತಗಳಿಂದಲೇ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲು ಸಾಧ್ಯ. ಈ ಉದ್ದೇಶಕ್ಕಾಗಿಯೇ ಶಾಲಾ ಹಂತಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಗಳನ್ನು ಸ್ಥಾಪಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತಿದೆ “ ಎಂದರು.ಕಾರ್ಯಕ್ರಮದಲ್ಲಿ ಯ.ತಾ.ಶಿ.ಸ.ಯಲ್ಲಾಪುರದ

 ಮುಖ್ಯಾಧ್ಯಾಪಕರಾದ ಶ್ರೀ ಎನ್ ಎಸ್ ಭಟ್ ಅವರು ಸ್ವಾಗತಿಸಿದರೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ  ಪಟಗಾರ ಅವರು ವಂದಿಸಿದರು.ಶಿಕ್ಷಕರಾದ ಶ್ರೀ ವಿನೋದ ಭಟ್ಟ ಅವರು ನಿರ್ವಹಿಸಿದರು.ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಾ ಸಮಾಜ ವಿಜ್ಞಾನ ಸಂಘದ ವಿವಿಧ ಪದಾಧಿಕಾರಿಗಳಾದ ಶ್ರೀಮತಿ ನಾಗರತ್ನ ನಾಯಕ, ಸ.ಪ್ರೌ.ಶಾಲೆ ಯಲ್ಲಾಪುರ  ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಹೆಗಡೆ, ವಿಶ್ವದರ್ಶನ ಪ್ರೌಢ ಶಾಲೆ ಇಡಗುಂದಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ಇಂತಿದೆ:-

ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಶ್ರಾವಣಿ ಆಚಾರಿ ಸರ್ಕಾರಿ ಪ್ರೌಢಶಾಲೆ ನಂದೊಳ್ಳಿ  ಪ್ರಥಮ, ನಂತ ಗುನಗಾವಾಯ್.ಟಿ.ಎಸ್.ಎಸ್ ಪ್ರೌಢಶಾಲೆ ಯಲ್ಲಾಪುರ ದ್ವಿತೀಯ

ಪ್ರಜ್ವಲ ದೇವಳಿ ಸರ್ಕಾರಿ ಪ್ರೌಢಶಾಲೆ ಬಿಸಗೋಡ ತೃತೀಯ ಸ್ಥಾನ ಪಡೆದರು

ಪ್ರಬಂಧ(ಕನ್ನಡ) ಸ್ಪರ್ಧೆಯಲ್ಲಿ ಶ್ವೇತಾ  ಗಾಂವ್ಕರ್ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ ಪ್ರಥಮ,

ಸುಮೇಧಾ ಗಾಂವ್ಕರ್ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ ದ್ವಿತೀಯ,

ಸಂಜನಾ ಪೂಜಾರಿ ಸರ್ಕಾರಿ ಪ್ರೌಢಶಾಲೆ ಬಿಸಗೋಡ ಮತ್ತು ಬಮ್ಮಿಬಾಯಿ ಜೋರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುರ ತೃತೀಯ ಸ್ಥಾನ ಪಡೆದರು.

ಪ್ರಬಂಧ(ಇಂಗ್ಲೀಷ್) ಸ್ಪರ್ಧೆಯಲ್ಲಿ ಅನುಜ್ಞಾ ಗಾಂವ್ಕರ    ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರ ಪ್ರಥಮ, ಸಿಂಚನಾ ಭಟ್ಟ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರ ದ್ವಿತೀಯ ಸ್ಥಾನ ಪಡೆದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿನ್ಮಯ ದುಂಡಿ ಸರ್ಕಾರಿ ಪ್ರೌಢಶಾಲೆ ಯಲ್ಲಾಪುರ ಪ್ರಥಮ, ಸುಜಿತ್ ಭಟ್ಟ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿ  ದ್ವಿತೀಯ, ಪ್ರಥಮ ಭಟ್ಟ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರ ಮತ್ತು

ಭಾವನಾ ಕೆರೆಹೊಸುರ ಕೆ.ಪಿ.ಎಸ್ ಕಿರವತ್ತಿ ಇವರುಗಳು ತೃತೀಯ ಸ್ಥಾನ ಪಡೆದರು. 

ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಗುರುವಾರ, ನವೆಂಬರ್ 10, 2022

ಫಿಸಿಯೋಥೆರಪಿ ವರದಿ

ತಾಲೂಕಿನಲ್ಲಿ ವೇಳಾಪತ್ರಿಕೆಯಂತೆ ಫಿಸಿಯೋ ಥೆರಪಿ ಕಾರ್ಯಕ್ರಮ ನಡೆಯಿತು.

ಇಂದು ದಿನಾಂಕ 10.11.2022 ರಂದು ಯಲ್ಲಾಪುರ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಸಂಪನ್ಮೂಲ ಕೇಂದ್ರದಲ್ಲಿ ತಾಲೂಕಿನ ಗೃಹಾಧಾರಿತ ಹಾಗೂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ದೈಹಿಕ ವಿಕಲತೆ ಸಿಪಿ ಹಾಗೂ ಬಹು ವಿಕಲತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಹಳಿಯಾಳದ ಡಾ|| ಸೋನಾಲಿ ಟಿ ಬಾಂದುರ್ಗಿ(BPT) ಇವರು ಮಕ್ಕಳ ವಿಕಲತೆಗೆ ಅನುಗುಣವಾಗಿ ಫಿಜಿಯೋಥೆರಪಿ ಮಾಡಿದರು. 6 ಮಕ್ಕಳು ಫಿಜಿಯೋಥೆರಪಿಗೆ ಹಾಜರಿದ್ದರು. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30ರ ಗಂಟೆಯವರೆಗೆ ಫಿಜಿಯೋಥೆರಪಿಯನ್ನು ನೀಡಲಾಯಿತು

ಬುಧವಾರ, ನವೆಂಬರ್ 9, 2022

ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ವರದಿ

ಶಾಲೆ ಬಿಟ್ಟ ಮಕ್ಕಳ ವಿವರ ಸಲ್ಲಿಸಿ.ದೀರ್ಘ ಗೈರು ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲೆಗಳಿಂದ ಪಡೆಯುವುದು.

ವಿವೇಕ ಶಾಲೆಗಳನ್ನು ನವೆಂಬರ ೧೪ ರಂದು ಉದ್ಘಾಟನೆ ಮಾಡಲಾಗುವುದು. ಪೂರ್ವತಯಾರಿ ಮಾಡಲು ಸಿ.ಆರ್‌.ಪಿಗಳು ಮೇಲುಸ್ತುವಾರಿ ಮಾಡಿ.

ಅಮೃತ ಶಾಲೆ ದೃಢೀಕರಣ ಮತ್ತು ವರದಿ ತಕ್ಷಣ ನೀಡಲು ತಿಳಿಸಿದೆ.


ಸಿವಿಲ್ ಕಾಮಗಾರಿಯನ್ನು (ರಿಪೇರಿ/ ಹೊಸಾ ಕಟ್ಟಡ/ ಶೌಚಾಲಯ/ ಕಂಪೌಂಡ) ಸಿ.ಆರ್.ಪಿ.ಗಳು ಮೇಲುಸ್ತುವಾರಿ ನಡೆಸಿ ಪರಿಸ್ಥಿತಿಯನ್ನು ವರದಿ ಸಲ್ಲಿಸಿ.


ಷೂ- ಸಾಕ್ಸ ಬಳಕೆಯ ಕುರಿತು ಪ್ರಗತಿ ವರದಿ ನೀಡಿ. ಎಸ್.ಡಿ.ಎಮ್.ಸಿಯವರ ದೃಢೀಕರಣ ಪಡೆಯಿರಿ.

ಎರಡು ಸೆಟ್ ಯೂನಿಫಾರಮನ್ನು ಶಾಲೆಗಳಿಗೆ ತಲುಪಿಸುವ ಕುರಿತು ಕ್ರಮವಹಿಸಿ. 


ಎಸ್.ಎ.ಟಿ.ಎಸ್.ನ ಇನ್ಸೆಂಟಿವ್ಸದಲ್ಲಿ ಷೂ- ಸಾಕ್ಸ ಮತ್ತು ಯೂನಿಫಾರಮ್ ವಿವರ ಸಲ್ಲಿಸಿ.


ವೀರಗಾಥಾ ಕಾರ್ಯಕ್ರಮದ ವರದಿ ಸಲ್ಲಿಸಿ, ಮೇಲುಸ್ತುವಾರಿ ಮಾಡಿ.


ಸಂಭ್ರಮ ಶನಿವಾರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಶ್ರಮಿಸುವುದು. 


ಕಲಿಕಾ ಕಾರಂಜಿ ಕಾರ್ಯಕ್ರಮನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಲು ತಿಳಿಸಿದೆ.


RBSK ಪ್ರಗತಿ ತಾಲೂಕಿನಲ್ಲಿ ಉತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲರಿಗೂ ಕೃತಜ್ಞತೆಗಳು.





ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟನೆ: ದಿನಾಂಕ

 ಘನ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಶಿಕ್ಷಕರ ತರಬೇತಿ ಯೋಜನೆ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೧೧-೦೫-೨೦೨೨ ರಂದು ಉದ್ಘಾಟನೆಗೊಂಡಿತು. ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಮಮ್ವಯಾಧಿಕಾರಿಗಳು ಮತ್ತು ತಾಲೂಕಾ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಉಮಾಪತಿ ಎನ್. ಎಚ್. ಜೊತೆಯಾಗಿ ಸಸ್ಯಕ್ಕೆ ನೀರೆರೆಯುವ ಮೂಲಕ ಸಾಂಕೇತಿಕವಾಗಿ ಕಲಿಕಾ ಚೇತರಿಕೆ ತರಬೇತಿಯನ್ನು ಉದ್ಘಾಟಿಸಿದರು.

ಭಾನುವಾರ, ಅಕ್ಟೋಬರ್ 2, 2022

Nishtha batch - 2

ದೀಕ್ಷಾ ಪ್ಲಾಟ್ ಫಾರ್ಮ್ ನಲ್ಲಿ NEP ಗುರುಚೇತನ ತರಬೇತಿಯ ಬ್ಯಾಚ್-2ರ ಕೋರ್ಸ್ ಗಳನ್ನು ಮಾಡಲು ಈ ಕೆಳಗಿನ ಲಿಂಕ್ಗಳನ್ನು ಒತ್ತಿ ಅಥವಾ ಕ್ಲಿಕ್ ಮಾಡುವ ಮೂಲಕ ಕೋರ್ಸುಗಳನ್ನು ಪ್ರಾರಂಭಿಸಿ. ಕೋರ್ಸ್ ಗಳನ್ನು ಪ್ರಾರಂಭಿಸುವ ಮೊದಲು ಶೇರ್ ಮಾಡಲು ಮರೆಯದಿರಿ.


Batch2_KA_NEP_GC_151_ಕಲಿಕಾ ಫಲಗಳು ಹಾಗೂ ತರಗತಿ ಪ್ರಕ್ರಿಯೆ, (3 ರಿಂದ 5ನೇ ತರಗತಿ, ಪರಿಸರ ಅಧ್ಯಯನ)  ಈ ಮಾಡ್ಯೂಲನ ಅಧ್ಯಯನಕ್ಕಾಗಿ ಮುಂದಿನ ಲಿಂಕನ್ನು ಬಳಕೆ ಮಾಡಿಕೊಳ್ಳಲು ಕೋರಲಾಗಿದೆ.



 

BATCH2_ KA_NEP_GC_150_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (ಪೂರ್ವ ಪ್ರಾಥಮಿಕ ಹಾಗೂ 1 ಮತ್ತು 2 ನೇ ತರಗತಿ) really interesting and helpful on DIKSHA.



ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಿಂದ 

ನಿಮ್ಮ ಸುಲಭಕ್ಕಾಗಿ

ಟೆಕ್ನಿಕಲ್ ಟೀಮ್ 

ಬಿ.ಆರ್.ಸಿ. ಯಲ್ಲಾಪುರ

ಶಿರಸಿ ಶೈಕ್ಷಣಿಕ ಜಿಲ್ಲೆ ಉ.ಕ‌.

ಗುರುವಾರ, ಸೆಪ್ಟೆಂಬರ್ 29, 2022

ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನಾ ಎಕ್ಸೆಲ್ ನಮೂನೆಗಳು

 ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಮೂನೆ

ಸೂಚನೆಗಳು: ಮೇಲಿನ ಎಕ್ಸೆಲ್ ಶೀಟ್   ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ 3ಫಾರ್ಮೆಟ್ ಗಳನ್ನು ಒಳಗೊಂಡಿದೆ. 3 ನಮೂನೆಗಳು  ಫಾರ್ಮುಲಾಗಳನ್ನು ಹೊಂದಿದ್ದು ಪರಸ್ಪರ  ಸಂಬಂಧವನ್ನು ಹೊಂದಿವೆ. 

* ಮೊದಲನೇ ಭಾಗದಲ್ಲಿ ತಿಂಗಳ  ದೈನಂದಿನ ಲೆಕ್ಕಾಚಾರ ಒಳಗೊಂಡಿದ್ದು ಪ್ರತಿ ದಿನ 1-5 ಹಾಗೂ 6ರಿಂದ 7ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು ನಮೂದಿಸಿದರೆ ತನ್ನಿಂದ ತಾನೆ ಲೆಕ್ಕಾಚಾರವನ್ನು ಮಾಡಿಕೊಳ್ಳುತ್ತದೆ.

* ತಿಂಗಳಾಂತ್ಯದಲ್ಲಿ ಇಡೀ ತಿಂಗಳ ಮಾಸಿಕ ಲೆಕ್ಕಾಚಾರದ ಗೋಷ್ವಾರೆ ತನ್ನಿಂದತಾನೆ ಜನರೇಟ್ ಆಗುತ್ತದೆ.

* ಜೊತೆಗೆ ಈ ಮಾಹಿತಿ  ಉಪಯೋಗತಾ ಪ್ರಮಾಣಪತ್ರದ ಮುಂದಿನ ಎಕ್ಸೆಲ್ ಶೀಟ್ ಗೆ ವರ್ಗಾಯಿಸಲ್ಪಡುತ್ತವೆ.

* ಮುಂದಿನ ಪುಟದಲ್ಲಿ ಬೇಡಿಕೆಗೆ ಸಂಬಂಧಿತ ಎಕ್ಸೆಲ್  ಶೀಟ್ ಅನ್ನು ಕೂಡ ಸೇರಿಸಲಾಗಿದೆ.

ಎಲ್ಲಾ ಮುಖ್ಯಾಧ್ಯಾಪಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ 🙏 

ಸೋಮವಾರ, ಸೆಪ್ಟೆಂಬರ್ 12, 2022

Competitions and Webinars for School students on Reintroduction of Cheetah

 Competitions and Webinars for School students on Reintroduction of Cheetah

ªÀiÁ£ÀågÉ,

 

        ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಮಂತ್ರಾಲಯವು ಚಿರತೆಯನ್ನು ಮರುಪರಿಚಯಿಸುವ ಕುರಿತು ದಿನಾಂಕ 12.09.2022ರಿಂದ 16.09.2022ಬೆಳಿಗ್ಗೆ 10 -11 ಘಂಟೆ ಯ ವರೆಗೆ ವೆಬಿನಾರ್ ಆಯೋಜಿಸಿರುತ್ತದೆ ಮತ್ತು ವಿವಿಧ  ಸ್ಪರ್ಧೆ (ಕವನಸ್ಪರ್ಧೆ, ಘೋಶಾವಾಕ್ಯ ಸ್ಪರ್ಧೆ ಮತ್ತು ಛಾಯಚಿತ್ರ ಸ್ಪರ್ಧೆ) ಗಳನ್ನು ಆನಲೈನ ಮೂಲಕ ಆಯೋಜಿಸಿರುತ್ತದೆ. ಎಲ್ಲಾ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ವೆಬಿನಾರ್ ಮತ್ತು ಸ್ಪರ್ಧೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಲು ನಿರ್ದೇಶನ ನೀಡಲು ಕೋರಲಾಗಿದೆ. ಸ್ಪರ್ಧೆಯ ವಿವರಗಳನ್ನು ಜೊತೆಗೆ ನೀಡಲಾಗಿದೆ ಹಾಗೂ ವೆಬಿನಾರ್ ಲಿಂಕ್ ಗಳನ್ನು ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಕಳುಹಿಸಲಾಗುವುದು ಆದುದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.




ಸೂಚನೆ : ವೆಬಿನಾರ್ ಲಿಂಕ್ ಗಳನ್ನೂ ಪೋಸ್ಟರ್ ನಲ್ಲಿ ಹಾಕಲಾಗಿದೆ.


ಸ್ಪರ್ಧೆಯಲ್ಲಿ  ಭಾಗವಹಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

  1. ಸ್ಲೋಗನ್ ಬರವಣಿಗೆ ಸ್ಪರ್ಧೆಯ ಲಿಂಕ್: https://forms.gle/5arJZLKsNxxDSWVX7
  2. ಛಾಯಾಗ್ರಹಣ ಸ್ಪರ್ಧೆಯ ಲಿಂಕ್ : http://bnhsenvis.nic.in/ViewEvents.aspx?Id=23865&Year=2022
  3. ಕವನ ಬರೆಯುವ ಸ್ಪರ್ಧೆಯ ಲಿಂಕ್: https://forms.gle/wogU5V3SH1gNRTNH7

Thanks & regards
Sathyashree
Program Officer
--
ENVIS Centre KARNATAKA
Environmental Management & Policy Research Institute
'Hasiru Bhavana', Doresanipalya Forest Campus
Vinayakanagara Circle, J.P. Nagar 5th Phase
Bangalore 560 078
 
Phone: 080 26490746/47 | Fax: 080 26490745




ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate