ನಮ್ಮ ಇಲಾಖೆ ನಮ್ಮ ಹೆಮ್ಮೆ
ಕಲಿಕಾ ಫಲ ಆಧಾರಿತ ಪ್ರಶ್ನೆ ಕೋಠಿ
ಶುಕ್ರವಾರ, ನವೆಂಬರ್ 25, 2022
ಕಲಿಕಾ ಕಾರಂಜಿ
ಬುಧವಾರ, ನವೆಂಬರ್ 23, 2022
ತಾಲೂಕಾ ಚುನಾವಣಾ ಸಾಕ್ಷರತಾ ಕ್ಲಬ್ ಸ್ಫರ್ಧೆಗಳು
ಚುನಾವಣಾ ಸಾಕ್ಷರತಾ ಕ್ಲಬ್ ನ ವಿವಿಧ ಸ್ಪರ್ಧೆಗಳು ನಡೆದವು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಚುನಾವಣಾ ಸಾಕ್ಷರತಾ ಕ್ಲಬ್ ಯಲ್ಲಾಪುರ, ಸಮಾಜ ವಿಜ್ಞಾನ ಸಂಘ ಯಲ್ಲಾಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಯಲ್ಲಾಪುರ ತಾಲೂಕಾ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯ.ತಾ.ಶಿ.ಸ.ಯಲ್ಲಾಪುರದ ಆವಾರದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗುರುವಾರ, ನವೆಂಬರ್ 10, 2022
ಫಿಸಿಯೋಥೆರಪಿ ವರದಿ
ಇಂದು ದಿನಾಂಕ 10.11.2022 ರಂದು ಯಲ್ಲಾಪುರ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಸಂಪನ್ಮೂಲ ಕೇಂದ್ರದಲ್ಲಿ ತಾಲೂಕಿನ ಗೃಹಾಧಾರಿತ ಹಾಗೂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ದೈಹಿಕ ವಿಕಲತೆ ಸಿಪಿ ಹಾಗೂ ಬಹು ವಿಕಲತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಹಳಿಯಾಳದ ಡಾ|| ಸೋನಾಲಿ ಟಿ ಬಾಂದುರ್ಗಿ(BPT) ಇವರು ಮಕ್ಕಳ ವಿಕಲತೆಗೆ ಅನುಗುಣವಾಗಿ ಫಿಜಿಯೋಥೆರಪಿ ಮಾಡಿದರು. 6 ಮಕ್ಕಳು ಫಿಜಿಯೋಥೆರಪಿಗೆ ಹಾಜರಿದ್ದರು. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30ರ ಗಂಟೆಯವರೆಗೆ ಫಿಜಿಯೋಥೆರಪಿಯನ್ನು ನೀಡಲಾಯಿತು
ಬುಧವಾರ, ನವೆಂಬರ್ 9, 2022
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ವರದಿ
ಶಾಲೆ ಬಿಟ್ಟ ಮಕ್ಕಳ ವಿವರ ಸಲ್ಲಿಸಿ.ದೀರ್ಘ ಗೈರು ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲೆಗಳಿಂದ ಪಡೆಯುವುದು.
ವಿವೇಕ ಶಾಲೆಗಳನ್ನು ನವೆಂಬರ ೧೪ ರಂದು ಉದ್ಘಾಟನೆ ಮಾಡಲಾಗುವುದು. ಪೂರ್ವತಯಾರಿ ಮಾಡಲು ಸಿ.ಆರ್.ಪಿಗಳು ಮೇಲುಸ್ತುವಾರಿ ಮಾಡಿ.
ಅಮೃತ ಶಾಲೆ ದೃಢೀಕರಣ ಮತ್ತು ವರದಿ ತಕ್ಷಣ ನೀಡಲು ತಿಳಿಸಿದೆ.
ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟನೆ: ದಿನಾಂಕ
ಘನ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಶಿಕ್ಷಕರ ತರಬೇತಿ ಯೋಜನೆ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೧೧-೦೫-೨೦೨೨ ರಂದು ಉದ್ಘಾಟನೆಗೊಂಡಿತು. ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಮಮ್ವಯಾಧಿಕಾರಿಗಳು ಮತ್ತು ತಾಲೂಕಾ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಉಮಾಪತಿ ಎನ್. ಎಚ್. ಜೊತೆಯಾಗಿ ಸಸ್ಯಕ್ಕೆ ನೀರೆರೆಯುವ ಮೂಲಕ ಸಾಂಕೇತಿಕವಾಗಿ ಕಲಿಕಾ ಚೇತರಿಕೆ ತರಬೇತಿಯನ್ನು ಉದ್ಘಾಟಿಸಿದರು.