ಇಂದು ದಿನಾಂಕ
10.11.2022 ರಂದು ಯಲ್ಲಾಪುರ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಸಂಪನ್ಮೂಲ ಕೇಂದ್ರದಲ್ಲಿ
ತಾಲೂಕಿನ ಗೃಹಾಧಾರಿತ ಹಾಗೂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ದೈಹಿಕ ವಿಕಲತೆ ಸಿಪಿ ಹಾಗೂ ಬಹು
ವಿಕಲತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಹಳಿಯಾಳದ ಡಾ|| ಸೋನಾಲಿ ಟಿ ಬಾಂದುರ್ಗಿ(BPT) ಇವರು ಮಕ್ಕಳ ವಿಕಲತೆಗೆ ಅನುಗುಣವಾಗಿ
ಫಿಜಿಯೋಥೆರಪಿ ಮಾಡಿದರು. 6 ಮಕ್ಕಳು ಫಿಜಿಯೋಥೆರಪಿಗೆ ಹಾಜರಿದ್ದರು. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ
1:30ರ ಗಂಟೆಯವರೆಗೆ ಫಿಜಿಯೋಥೆರಪಿಯನ್ನು ನೀಡಲಾಯಿತು
ಗುರುವಾರ, ನವೆಂಬರ್ 10, 2022
ಫಿಸಿಯೋಥೆರಪಿ ವರದಿ
ಬುಧವಾರ, ನವೆಂಬರ್ 9, 2022
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯ ವರದಿ
ಶಾಲೆ ಬಿಟ್ಟ ಮಕ್ಕಳ ವಿವರ ಸಲ್ಲಿಸಿ.ದೀರ್ಘ ಗೈರು ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲೆಗಳಿಂದ ಪಡೆಯುವುದು.
ವಿವೇಕ ಶಾಲೆಗಳನ್ನು ನವೆಂಬರ ೧೪ ರಂದು ಉದ್ಘಾಟನೆ ಮಾಡಲಾಗುವುದು. ಪೂರ್ವತಯಾರಿ ಮಾಡಲು ಸಿ.ಆರ್.ಪಿಗಳು ಮೇಲುಸ್ತುವಾರಿ ಮಾಡಿ.
ಅಮೃತ ಶಾಲೆ ದೃಢೀಕರಣ ಮತ್ತು ವರದಿ ತಕ್ಷಣ ನೀಡಲು ತಿಳಿಸಿದೆ.
ಸಿವಿಲ್ ಕಾಮಗಾರಿಯನ್ನು (ರಿಪೇರಿ/ ಹೊಸಾ ಕಟ್ಟಡ/ ಶೌಚಾಲಯ/ ಕಂಪೌಂಡ) ಸಿ.ಆರ್.ಪಿ.ಗಳು ಮೇಲುಸ್ತುವಾರಿ ನಡೆಸಿ ಪರಿಸ್ಥಿತಿಯನ್ನು ವರದಿ ಸಲ್ಲಿಸಿ.
ಷೂ- ಸಾಕ್ಸ ಬಳಕೆಯ ಕುರಿತು ಪ್ರಗತಿ ವರದಿ ನೀಡಿ. ಎಸ್.ಡಿ.ಎಮ್.ಸಿಯವರ ದೃಢೀಕರಣ ಪಡೆಯಿರಿ.
ಎರಡು ಸೆಟ್ ಯೂನಿಫಾರಮನ್ನು ಶಾಲೆಗಳಿಗೆ ತಲುಪಿಸುವ ಕುರಿತು ಕ್ರಮವಹಿಸಿ.
ಎಸ್.ಎ.ಟಿ.ಎಸ್.ನ ಇನ್ಸೆಂಟಿವ್ಸದಲ್ಲಿ ಷೂ- ಸಾಕ್ಸ ಮತ್ತು ಯೂನಿಫಾರಮ್ ವಿವರ ಸಲ್ಲಿಸಿ.
ವೀರಗಾಥಾ ಕಾರ್ಯಕ್ರಮದ ವರದಿ ಸಲ್ಲಿಸಿ, ಮೇಲುಸ್ತುವಾರಿ ಮಾಡಿ.
ಸಂಭ್ರಮ ಶನಿವಾರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಶ್ರಮಿಸುವುದು.
ಕಲಿಕಾ ಕಾರಂಜಿ ಕಾರ್ಯಕ್ರಮನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಲು ತಿಳಿಸಿದೆ.
RBSK ಪ್ರಗತಿ ತಾಲೂಕಿನಲ್ಲಿ ಉತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲರಿಗೂ ಕೃತಜ್ಞತೆಗಳು.
ಕಲಿಕಾ ಚೇತರಿಕೆ ಕಾರ್ಯಕ್ರಮ ಉದ್ಘಾಟನೆ: ದಿನಾಂಕ
ಘನ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಶಿಕ್ಷಕರ ತರಬೇತಿ ಯೋಜನೆ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೧೧-೦೫-೨೦೨೨ ರಂದು ಉದ್ಘಾಟನೆಗೊಂಡಿತು. ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರು ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಮಮ್ವಯಾಧಿಕಾರಿಗಳು ಮತ್ತು ತಾಲೂಕಾ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಉಮಾಪತಿ ಎನ್. ಎಚ್. ಜೊತೆಯಾಗಿ ಸಸ್ಯಕ್ಕೆ ನೀರೆರೆಯುವ ಮೂಲಕ ಸಾಂಕೇತಿಕವಾಗಿ ಕಲಿಕಾ ಚೇತರಿಕೆ ತರಬೇತಿಯನ್ನು ಉದ್ಘಾಟಿಸಿದರು.
ಶನಿವಾರ, ನವೆಂಬರ್ 5, 2022
ಭಾನುವಾರ, ಅಕ್ಟೋಬರ್ 2, 2022
Nishtha batch - 2
ದೀಕ್ಷಾ ಪ್ಲಾಟ್ ಫಾರ್ಮ್ ನಲ್ಲಿ NEP ಗುರುಚೇತನ ತರಬೇತಿಯ ಬ್ಯಾಚ್-2ರ ಕೋರ್ಸ್ ಗಳನ್ನು ಮಾಡಲು ಈ ಕೆಳಗಿನ ಲಿಂಕ್ಗಳನ್ನು ಒತ್ತಿ ಅಥವಾ ಕ್ಲಿಕ್ ಮಾಡುವ ಮೂಲಕ ಕೋರ್ಸುಗಳನ್ನು ಪ್ರಾರಂಭಿಸಿ. ಕೋರ್ಸ್ ಗಳನ್ನು ಪ್ರಾರಂಭಿಸುವ ಮೊದಲು ಶೇರ್ ಮಾಡಲು ಮರೆಯದಿರಿ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಿಂದ
ನಿಮ್ಮ ಸುಲಭಕ್ಕಾಗಿ
ಟೆಕ್ನಿಕಲ್ ಟೀಮ್
ಬಿ.ಆರ್.ಸಿ. ಯಲ್ಲಾಪುರ
ಶಿರಸಿ ಶೈಕ್ಷಣಿಕ ಜಿಲ್ಲೆ ಉ.ಕ.
ಗುರುವಾರ, ಸೆಪ್ಟೆಂಬರ್ 29, 2022
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನಾ ಎಕ್ಸೆಲ್ ನಮೂನೆಗಳು
ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಮೂನೆ
ಸೂಚನೆಗಳು: ಮೇಲಿನ ಎಕ್ಸೆಲ್ ಶೀಟ್ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯ 3ಫಾರ್ಮೆಟ್ ಗಳನ್ನು ಒಳಗೊಂಡಿದೆ. 3 ನಮೂನೆಗಳು ಫಾರ್ಮುಲಾಗಳನ್ನು ಹೊಂದಿದ್ದು ಪರಸ್ಪರ ಸಂಬಂಧವನ್ನು ಹೊಂದಿವೆ.
* ಮೊದಲನೇ ಭಾಗದಲ್ಲಿ ತಿಂಗಳ ದೈನಂದಿನ ಲೆಕ್ಕಾಚಾರ ಒಳಗೊಂಡಿದ್ದು ಪ್ರತಿ ದಿನ 1-5 ಹಾಗೂ 6ರಿಂದ 7ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯನ್ನು ನಮೂದಿಸಿದರೆ ತನ್ನಿಂದ ತಾನೆ ಲೆಕ್ಕಾಚಾರವನ್ನು ಮಾಡಿಕೊಳ್ಳುತ್ತದೆ.
* ತಿಂಗಳಾಂತ್ಯದಲ್ಲಿ ಇಡೀ ತಿಂಗಳ ಮಾಸಿಕ ಲೆಕ್ಕಾಚಾರದ ಗೋಷ್ವಾರೆ ತನ್ನಿಂದತಾನೆ ಜನರೇಟ್ ಆಗುತ್ತದೆ.
* ಜೊತೆಗೆ ಈ ಮಾಹಿತಿ ಉಪಯೋಗತಾ ಪ್ರಮಾಣಪತ್ರದ ಮುಂದಿನ ಎಕ್ಸೆಲ್ ಶೀಟ್ ಗೆ ವರ್ಗಾಯಿಸಲ್ಪಡುತ್ತವೆ.
* ಮುಂದಿನ ಪುಟದಲ್ಲಿ ಬೇಡಿಕೆಗೆ ಸಂಬಂಧಿತ ಎಕ್ಸೆಲ್ ಶೀಟ್ ಅನ್ನು ಕೂಡ ಸೇರಿಸಲಾಗಿದೆ.
ಎಲ್ಲಾ ಮುಖ್ಯಾಧ್ಯಾಪಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ 🙏
ಸೋಮವಾರ, ಸೆಪ್ಟೆಂಬರ್ 12, 2022
Competitions and Webinars for School students on Reintroduction of Cheetah
Competitions and Webinars for School students on Reintroduction of Cheetah
ªÀiÁ£ÀågÉ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ
ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಮಂತ್ರಾಲಯವು ಚಿರತೆಯನ್ನು ಮರುಪರಿಚಯಿಸುವ ಕುರಿತು ದಿನಾಂಕ
12.09.2022ರಿಂದ 16.09.2022ಬೆಳಿಗ್ಗೆ 10 -11 ಘಂಟೆ ಯ ವರೆಗೆ ವೆಬಿನಾರ್ ಆಯೋಜಿಸಿರುತ್ತದೆ ಮತ್ತು
ವಿವಿಧ ಸ್ಪರ್ಧೆ (ಕವನಸ್ಪರ್ಧೆ, ಘೋಶಾವಾಕ್ಯ ಸ್ಪರ್ಧೆ
ಮತ್ತು ಛಾಯಚಿತ್ರ ಸ್ಪರ್ಧೆ) ಗಳನ್ನು ಆನಲೈನ ಮೂಲಕ ಆಯೋಜಿಸಿರುತ್ತದೆ. ಎಲ್ಲಾ ಶಾಲೆ ಮತ್ತು ಕಾಲೇಜು
ವಿದ್ಯಾರ್ಥಿಗಳು ವೆಬಿನಾರ್ ಮತ್ತು ಸ್ಪರ್ಧೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಲು ನಿರ್ದೇಶನ ನೀಡಲು ಕೋರಲಾಗಿದೆ.
ಸ್ಪರ್ಧೆಯ ವಿವರಗಳನ್ನು ಜೊತೆಗೆ ನೀಡಲಾಗಿದೆ ಹಾಗೂ ವೆಬಿನಾರ್ ಲಿಂಕ್ ಗಳನ್ನು ಪ್ರತಿದಿನ ಬೆಳಿಗ್ಗೆ
9 ಗಂಟೆಗೆ ಕಳುಹಿಸಲಾಗುವುದು ಆದುದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಸೂಚನೆ : ವೆಬಿನಾರ್ ಲಿಂಕ್ ಗಳನ್ನೂ ಪೋಸ್ಟರ್ ನಲ್ಲಿ ಹಾಕಲಾಗಿದೆ.
- ಸ್ಲೋಗನ್ ಬರವಣಿಗೆ ಸ್ಪರ್ಧೆಯ ಲಿಂಕ್: https://forms.gle/
5arJZLKsNxxDSWVX7 - ಛಾಯಾಗ್ರಹಣ ಸ್ಪರ್ಧೆಯ ಲಿಂಕ್ : http://bnhsenvis.nic.in/
ViewEvents.aspx?Id=23865&Year= 2022 - ಕವನ ಬರೆಯುವ ಸ್ಪರ್ಧೆಯ ಲಿಂಕ್: https://forms.gle/
wogU5V3SH1gNRTNH7
ಗುರುವಾರ, ಜುಲೈ 21, 2022
ಮಂಗಳವಾರ, ಜೂನ್ 21, 2022
ವಿದ್ಯಾ ಪ್ರವೇಶ,ಕಲಿಕಾ ಚೇತರಿಕೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂಚನೆಗಳು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ,
ಶೈ.ಜಿ.ಶಿರಸಿ (ಉ.ಕ)
ಜ್ಞಾಪನ
ವಿಷಯ: ವಿದ್ಯಾ
ಪ್ರವೇಶ,ಕಲಿಕಾ ಚೇತರಿಕೆ ಮತ್ತು ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ
ಮಾರ್ಗದರ್ಶಿ ಸೂಚನೆಗಳು.