ಸೋಮವಾರ, ಸೆಪ್ಟೆಂಬರ್ 20, 2021

ದಿನಾಂಕ 18/9/2021 ರ DDPI MEETING HEADLINE

ಮಾನ್ಯ ಉಪನಿರ್ದೇಶಕರಾದ ಶ್ರೀ ದಿವಾಕರ ಶೆಟ್ಟಿ, ಮಾನ್ಯ DYPC ಗಳಾ ಶ್ರೀ ಸಿ.ಎಸ್. ನಾಯ್ಕ ಮತ್ತು ಶ್ರೀ ವೆಂಕಟೇಶ ಪಟಗಾರ ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎನ್. ಆರ್. ಹೆಗಡೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿಗಳಾದ ಶ್ರೀ ಶ್ರೀರಾಮ ಹೆಗಡೆಯವರ  ಉಪಸ್ಥಿತಿಯಲ್ಲಿ ಸಿ.ಆರ್. ಪಿ., ಬಿ.ಆರ್.ಪಿ., ಇ.ಸಿ.ಒ., ಗಳ ಸಭೆಯನ್ನು ದಿನಾಂಕ: ೧೮.೦೯.೨೦೨೧ ರಂದು ಮಧ್ಯಾಹ್ನ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದ್ದರು.





 ಸಭೆಯಲ್ಲಿ ಚರ್ಚಿತ ವಿಷಯಗಳು: 

ತಾಲೂಕಿನಲ್ಲಿ ಅನುಷ್ಠಾನಕ್ಕಾಗಿ:

1) ಪ್ರತಿ ಶನಿವಾರ ಶಾಲಾ ತರಗತಿ ಕೋಣೆ sanitizer ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳುವುದು 

2) SATS ಲ್ಲಿ ಬುಕ್ಸ್ ತೆಗೆದುಕೊಂಡ ಬಗ್ಗೆ ಎಂಟ್ರಿ ಮಾಡುವುದು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಹಂಚಿದ ಬಗ್ಗೆಯೂ ಎಂಟ್ರಿ ಮಾಡುವುದು ಕಡ್ಡಾಯವಾಗಿ 20/9/2021 ರ ಒಳಗೆ ಮಾಡುವುದು

3) ಹೊಸ ಪುಸ್ತಕ ನೀಡಿದ ನಂತರ ನೀಡಿದ ಹಳೇ ಪುಸ್ತಕ ವಾಪಸ್ ಪಡೆದು ಬುಕ್ ಬ್ಯಾಂಕಲ್ಲಿ ಇಡುವುದು

4) ಪಠ್ಯಪುಸ್ತಕ ತೆಗೆದುಕೊಂಡ ಬಗ್ಗೆ ಪಠ್ಯಪುಸ್ತಕ ರಜಿಸ್ಟರ್ ಅಲ್ಲಿ data entry ಮಾಡಿರಿ. Urgent 

5) FA 1 ಗೆ ಸಂಬಂಧಿಸಿ ಶಿಕ್ಷಕರ ವೈಯಕ್ತಿಕ ಹಾಗೂ ಕ್ರೂಢೀಕೃತ ಅಂಕವಹಿ ದಿನಾಂಕ 20/9/2021 ರ ಒಳಗೆ ನಿರ್ವಹಿಸಿಡುವುದು ( ಘಟಕ ಪರೀಕ್ಷೆಗೆ ಹೆಚ್ಚಿನ ಆಧ್ಯತೆ ನೀಡಿರಿ 

6) ಪ್ರತಿ ಘಟಕಕ್ಕೆ ಘಟಕ ಪರೀಕ್ಷೆಯನ್ನು ಕಡ್ಡಾಯವಾಗಿ ನಿರ್ವಹಿಸಿ 

7) ಸೇತುಬಂಧ ಕಾರ್ಯಕ್ರಮಕ್ಕೆ ಸಂಬಂಧಿಸಿ SAP ನಿರ್ವಹಿಸಿಡುವುದು ಹಾಗೂ ಪೂರಕ ಬೋಧನೆಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಸೂಕ್ತ ಕ್ರಿಯಾಯೋಜನೆ ಮಾಡಿಡುವುದು 

8) ಮಕ್ಕಳ ಕೃತಿ ಸಂಪುಟ update ಮಾಡಿಡುವುದು ಮತ್ತು ಪ್ರತಿ ವಿದ್ಯಾರ್ಥಿಗಳ ಕೃತಿ ಸಂಪುಟದ ಎಡಭಾಗಕ್ಕೆ ತಿಂಗಳುವಾರು ವಿಷಯವಾರು ಕೊಟ್ಟಿದ್ದು ತಿದ್ದಿದ್ದು ಎಂಬ ಬಗ್ಗೆ ಘೋಷ್ವಾರೆ ಹಾಕಿಡುವುದು. ಮತ್ತು ವಿಷಯವಾರು ಒಂದು ಪ್ರತಿಯನ್ನು ಸಿಆರ್ಪಿ ಗೆ ದಿನಾಂಕ 20/9/2021ರ ಸಂಜೆ 5 ಗಂಟೆ ಒಳಗೆ ವಾಟ್ಸಪ್ ಮಾಡುವುದು 

9) ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ವಾರಕ್ಕೆ ಕನಿಷ್ಠ ಎರಡರಂತೆ ಅಭ್ಯಾಸ ಹಾಳೆಯನ್ನು ನೀಡಿ ತಿದ್ದಿ ಪರಿಶೀಲಿಸಿ ದಿನಾಂಕ ದೊಡನೆ ಸಹಿಮಾಡಿ ಕೃತಿ ಸಂಪುಟಕ್ಕೆ ಹಾಕಿಡುವುದು. 

10) ಶಿಕ್ಷಕರ ಹಾಜರಿ ಪುಸ್ತಕದ ಕೊನೆಯಲ್ಲಿ ಪ್ರತಿ ತಿಂಗಳು ಸಾಂದರ್ಭಿಕ ರಜೆ ಹಾಗೂ ನಿರ್ಬಂಧಿತ ರಜೆ ಯ ಘೋಷ್ವಾರೆ ಹಾಕಿಡುವುದು🚨🚨CL ನ್ನು ಆವಕ ರಿಜಿಸ್ಟರ್ ನಲ್ಲಿ ಎಂಟ್ರಿ ಮಾಡುವುದು ಕಡ್ಡಾಯವಾಗಿರುತ್ತದೆ. ಆವಕ ರಿಜಿಸ್ಟರ್ ನಲ್ಲಿ ಎಂಟ್ರಿಆಗದ CL ನ್ನು ಗೈರುಹಾಜರಿ ಎಂದು ಪರಿಗಣಿಸಿ ಕ್ರಮ ಜರುಗಿಸಲಾಗುತ್ತದೆ. 

11) ಇನ್ಸ್ಪೈರ್ ಅವಾರ್ಡ್ ಗೆ ಸಂಬಂಧಿಸಿ ವಿದ್ಯಾರ್ಥಿಗಳನ್ನು ಕೂಡಲೇ ರಿಜಿಸ್ಟರ್ ಮಾಡಿಸುವುದು 

12) OOSC ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸಲು ಸೂಕ್ತ ಕ್ರಮವಹಿಸುವುದು ಮುಖ್ಯ ಶಿಕ್ಷಕರ ಆದ್ಯ ಕರ್ತವ್ಯ 

13) ಪೋಷಣಾ ಅಭಿಯಾನದ ಮಾಹಿತಿಯನ್ನು STS ಲ್ಲಿ entry ಮಾಡುವುದು 

14) 1 to 10 ಮಕ್ಕಳ ಹಾಜರಾತಿಯನ್ನು STS ಲ್ಲಿ ಪ್ರತಿದಿನ ಇಂದಿಕರಿಸುವುದು. 1 to 5th ವಿದ್ಯಾರ್ಥಿಗಳಿಗೆ online option ಹಾಕಿರಿ ಹಾಗೂ 6th to 10th ವಿದ್ಯಾರ್ಥಿಗಳಿಗೆ online ಅಥವಾ school premises option choice ಮಾಡಿ ಹಾಕಿರಿ 

👆👆👆👆👆👆👆👆👆👆👆 ಹೆಚ್ಚಿನ ಮಾಹಿತಿ ಬೇಕಾದಲ್ಲಿ CRP/ BRP/ECO ರವರಿಗೆ call ಮಾಡಿ ಮಾಹಿತಿ ಪಡೆಯಲು ತಿಳಿಸಿದೆ. 🙏🙏🙏🙏🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate